September 14, 2026
Monday, September 14, 2026
spot_img

ಗೌರಿ-ಗಣೇಶ ಹಬ್ಬಕ್ಕೆ ಮನೆಯಲ್ಲೇ ಮಾಡಿ ರುಚಿಕರ ‘ಕೋಕನಟ್ ಲಡ್ಡು’.. ರುಚಿ ಮಾತ್ರ ನೆಕ್ಸ್ಟ್ ಲೆವೆಲ್

ಹಸಿ ತೆಂಗಿನಕಾಯಿ ತುರಿ

ಹಾಲು

ಕಂಡೆನ್ಸ್ಡ್ ಮಿಲ್ಕ್

ತುಪ್ಪ

ಏಲಕ್ಕಿ ಪುಡಿ

ಗೋಡಂಬಿ ಮತ್ತು ಒಣದ್ರಾಕ್ಷಿ

ಒಣ ತೆಂಗಿನಕಾಯಿ ಪುಡಿ

ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು, ಅದಕ್ಕೆ 1 ಚಮಚ ತುಪ್ಪ ಹಾಕಿ. ತುಪ್ಪ ಬಿಸಿಯಾದ ಮೇಲೆ ತುರಿದಿಟ್ಟುಕೊಂಡ ಹಸಿ ತೆಂಗಿನಕಾಯಿ ಹಾಕಿ 3-4 ನಿಮಿಷ ಚೆನ್ನಾಗಿ ಹುರಿಯಿರಿ. ನೆನಪಿಡಿ, ಕಾಯಿ ಬಣ್ಣ ಬದಲಾಗಬಾರದು, ಅದರಲ್ಲಿರೋ ಹಸಿ ವಾಸನೆ ಹೋಗಿ ಘಮ ಬರಬೇಕು ಅಷ್ಟೇ. ಈಗ ಹುರಿದ ಕಾಯಿಗೆ 1 ಕಪ್ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕಾಯಿ ಎಲ್ಲಾ ಹಾಲನ್ನು ಹೀರಿಕೊಂಡು ಮೆತ್ತಗಾಗುವವರೆಗೆ ಸಣ್ಣ ಉರಿಯಲ್ಲೇ ಬೇಯಿಸಿ. ಹಾಲು ಪೂರ್ತಿ ಆರಿದ ಮೇಲೆ, ಕಂಡೆನ್ಸ್ಡ್ ಮಿಲ್ಕ್ ಅಥವಾ ಸಕ್ಕರೆ ಸೇರಿಸಿ. ಸಕ್ಕರೆ ಹಾಕಿದ ತಕ್ಷಣ ಮಿಶ್ರಣ ಸ್ವಲ್ಪ ನೀರಾಗುತ್ತದೆ. ಸಣ್ಣ ಉರಿಯಲ್ಲೇ ಕೈಯಾಡಿಸಿ. ಇನ್ನೊಂದು ಸಣ್ಣ ಬಾಣಲೆಯಲ್ಲಿ ಉಳಿದ 1 ಚಮಚ ತುಪ್ಪ ಹಾಕಿ ಗೋಡಂಬಿ, ಒಣದ್ರಾಕ್ಷಿ ಹುರಿದುಕೊಳ್ಳಿ. ಈ ಹುರಿದ ಗೋಡಂಬಿ, ಒಣದ್ರಾಕ್ಷಿ ಮತ್ತು ಏಲಕ್ಕಿ ಪುಡಿಯನ್ನು ಲಡ್ಡು ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿ.

ಮಿಶ್ರಣ ಸ್ವಲ್ಪ ಉಗುರು ಬೆಚ್ಚಗಿರುವಾಗಲೇ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು, ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿ. ನಿಮಗೆ ಬೇಕಿದ್ದರೆ ಈ ಲಡ್ಡುಗಳನ್ನು ಒಣ ತೆಂಗಿನಕಾಯಿ ಪುಡಿಯಲ್ಲಿ ಒಮ್ಮೆ ಹೊರಳಿಸಿದರೆ, ನೋಡೋಕೆ ಥೇಟ್ ಸ್ವೀಟ್ ಅಂಗಡಿ ಲಡ್ಡು ತರಾನೇ ಕಾಣುತ್ತೆ. ಈ ಲಡ್ಡುವನ್ನು ಫ್ರಿಡ್ಜ್‌ನಲ್ಲಿಟ್ಟರೆ 4-5 ದಿನ ಆರಾಮಾಗಿ ಇಟ್ಟು ತಿನ್ನಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !