ಹಸಿ ಮೆಣಸಿನಕಾಯಿ
ಸಾಸಿವೆ
ಮೆಂತೆ ಕಾಳು
ಜೀರಿಗೆ
ಅರಿಶಿನ ಪುಡಿ
ಇಂಗು
ನಿಂಬೆಹಣ್ಣಿನ ರಸ
ಉಪ್ಪು
ಎಣ್ಣೆ
ಮೊದಲು ಹಸಿ ಮೆಣಸಿನಕಾಯಿಯನ್ನು ಚನ್ನಾಗಿ ತೊಳೆದು, ಒಂದು ಒಣ ಬಟ್ಟೆಯಲ್ಲಿ ನೀರೇ ಇಲ್ಲದಂತೆ ಒರೆಸಿಕೊಳ್ಳಿ. ನಂತರ ತೊಟ್ಟು ತೆಗೆದು ನಿಮಗೆ ಬೇಕಾದ ಗಾತ್ರಕ್ಕೆ ಕಟ್ ಮಾಡಿ ಇಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಸಾಸಿವೆ, ಮೆಂತೆ ಮತ್ತು ಜೀರಿಗೆಯನ್ನು ಸಣ್ಣ ಉರಿಯಲ್ಲಿ ಸೀದುಹೋಗದಂತೆ 2-3 ನಿಮಿಷ ಹುರಿದುಕೊಳ್ಳಿ. ಚಟಪಟ ಅಂದಮೇಲೆ ಒಲೆಯಿಂದ ಇಳಿಸಿ ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಈಗ ಅದೇ ಬಾಣಲಿಗೆ ಎಣ್ಣೆ ಹಾಕಿ ಕಾಯಿಸಿ. ಎಣ್ಣೆ ಕಾದ ಮೇಲೆ ಒಲೆ ಬಂದ್ ಮಾಡಿ ಕಾದ ಎಣ್ಣೆಗೆ ಇಂಗು ಮತ್ತು ಅರಿಶಿನ ಪುಡಿ ಹಾಕಿ. ನಂತರ ಕಟ್ ಮಾಡಿಟ್ಟ ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಮಾಡಿಟ್ಟುಕೊಂಡ ಮಸಾಲೆ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕೊನೆಯಲ್ಲಿ ನಿಂಬೆಹಣ್ಣಿನ ರಸವನ್ನು ಹಿಂಡಿ ಎಲ್ಲವನ್ನೂ ಚೆನ್ನಾಗಿ ಮೆಣಸಿನಕಾಯಿಗೆ ಹಿಡಿಯುವಂತೆ ಕಲಸಿ.
ಅಷ್ಟೇ.. ನಾಲಿಗೆಯಲ್ಲಿ ನೀರೂರಿಸುವ ರುಚಿಕರ ಹಸಿ ಮೆಣಸಿನಕಾಯಿ ಉಪ್ಪಿನಕಾಯಿ ಸಿದ್ಧ.



