September 14, 2026
Monday, September 14, 2026
spot_img

FOOD | ಬೀಟ್ರೂಟ್ ತಿನ್ನಲ್ಲ ಅನ್ನೋ ಮಕ್ಕಳಿಗೂ ಇಷ್ಟ ಆಗುತ್ತೆ ಈ ಸೂಪರ್ ಟೇಸ್ಟಿ ಪಲಾವ್

ಅಕ್ಕಿ

ಬೀಟ್ರೂಟ್

ಈರುಳ್ಳಿ & ಟೊಮೆಟೊ

ಹಸಿಮೆಣಸಿನಕಾಯಿ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಏಲಕ್ಕಿ, ಲವಂಗ, ಚಕ್ಕೆ, ಬಿರಿಯಾನಿ ಎಲೆ, ಜೀರಿಗೆ

ಖಾರದ ಪುಡಿ, ಗರಂ ಮಸಾಲೆ

ಎಣ್ಣೆ ಅಥವಾ ತುಪ್ಪ

ಪುದೀನಾ ಮತ್ತು ಕೊತ್ತಂಬರಿ ಸೊಪ್ಪು

ಉಪ್ಪು ಮತ್ತು ನೀರು

ಮೊದಲು ಕುಕ್ಕರ್‌ಗೆ ತುಪ್ಪ ಅಥವಾ ಎಣ್ಣೆ ಹಾಕಿ ಕಾಯಿಸಿ. ಚಕ್ಕೆ, ಲವಂಗ, ಏಲಕ್ಕಿ, ಬಿರಿಯಾನಿ ಎಲೆ ಮತ್ತು ಜೀರಿಗೆ ಹಾಕಿ ಘಮ ಬರುವವರೆಗೆ ಹುರಿಯಿರಿ. ನಂತ್ರ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಗೋಲ್ಡನ್ ಬಣ್ಣ ಬರೋವರೆಗೂ ಹುರಿಯಿರಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗೋ ತನಕ ಬಾಡಿಸಿ, ಟೊಮೆಟೊ ಸೇರಿಸಿ ಮೆತ್ತಗಾಗುವರೆಗೆ ಬೇಯಿಸಿ. ಈಗ ತುರಿದ ಬೀಟ್ರೂಟ್, ಖಾರದ ಪುಡಿ, ಗರಂ ಮಸಾಲೆ ಮತ್ತು ಪುದೀನಾ ಹಾಕಿ 2 ನಿಮಿಷ ಚನ್ನಾಗಿ ಮಿಕ್ಸ್ ಮಾಡಿ. ನೆನೆಸಿದ ಅಕ್ಕಿ ಹಾಕಿ ಮಸಾಲೆಯೊಂದಿಗೆ ಕಲಸಿ. 2 ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಿಸಿ. ಕುಕ್ಕರ್ ಮುಚ್ಚಳ ಮುಚ್ಚಿ 2 ವಿಸಿಲ್ ಕೂಗಿಸಿದರೆ, ಬೀಟ್ರೂಟ್ ಪಲಾವ್ ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !