ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಜಿಲ್ಲೆಯ ಟಿ. ನರಸೀಪುರದ ಗಣೇಶೋತ್ಸವ ಮೆರವಣಿಗೆ ಈಗ ಸಿಕ್ಕಾಪಟ್ಟೆ ಚರ್ಚೆಯಲ್ಲಿರೋ ವಿಷ್ಯ. ಮಸೀದಿ ಮುಂದೆ ಪಟಾಕಿ ಹಚ್ಚಬೇಡಿ ಎನ್ನುವ ಖಡಕ್ ವಾರ್ನಿಂಗ್ ನೀಡಿರೋ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್ ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸ್ವಲ್ಪ ಖಡಕ್ ಆಗಿ ಸೂಚನೆ ಕೊಟ್ಟಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಗಣೇಶ ಮೆರವಣಿಗೆಗೆ ನಿಗದಿತ ರೂಟ್ ಮ್ಯಾಪ್ ಇರುತ್ತದೆ. ಹೀಗಿರುವಾಗ ಮಸೀದಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳ ಬಳಿ ಪಟಾಕಿ ಸಿಡಿಸುವ ಅಗತ್ಯವೇನು ಅಂತ ಅವರು ಪ್ರಶ್ನಿಸಿದ್ದಾರೆ. ಇನ್ಸ್ಪೆಕ್ಟರ್ ಧನಂಜಯ್ ಅವರು ಸ್ವಲ್ಪ ಖಡಕ್ ಆಗಿ ಸೂಚನೆ ನೀಡಿರಬಹುದು. ಆದ್ರೆ ಪೊಲೀಸರು ಮುನ್ನೆಚ್ಚರಿಕೆ ಕೊಡೋದು ನಿಮ್ಮಗಳ ಸುರಕ್ಷತೆಗೆ ಎಂದರು.
ಇದನ್ನೂ ಓದಿ:
ಇನ್ಸ್ಪೆಕ್ಟರ್ ಧನಂಜಯ್ ಕಳೆದ ಮೂರು ವರ್ಷಗಳಿಂದ ಟಿ. ನರಸೀಪುರದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದು, ಸ್ಥಳೀಯ ಪರಿಸ್ಥಿತಿಯ ಬಗ್ಗೆ ಅವರಿಗೆ ಅರಿವಿದೆ. ಕಳೆದ ವರ್ಷ ಸ್ವಲ್ಪ ಗೊಂದಲ ಉಂಟಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ಅವರು ಖಡಕ್ ಸೂಚನೆ ನೀಡಿರಬಹುದು ಎಂದು ಗೃಹ ಸಚಿವರು ಹೇಳಿದರು.
ರೂಟ್ ಮ್ಯಾಪ್ ಇರುವಾಗ ಅಲ್ಲೇ ಪಟಾಕಿ ಹಚ್ಚುವ ಅಗತ್ಯ ಏನು?
ಗಣೇಶ ಮೆರವಣಿಗೆ ಸಾಗುವ ಮಾರ್ಗವನ್ನು ಮೊದಲೇ ನಿಗದಿಪಡಿಸಲಾಗಿರುತ್ತದೆ. ಒಂದೇ ಸ್ಥಳಕ್ಕೆ ತೆರಳಲು ಹಲವು ಮಾರ್ಗಗಳೂ ಇರುತ್ತವೆ. ಹೀಗಾಗಿ ಎಲ್ಲರೂ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. “ರೂಟ್ ಮ್ಯಾಪ್ ಇರುವಾಗ ಅಲ್ಲೇ ಪಟಾಕಿ ಹಚ್ಚುವ ಅಗತ್ಯ ಏನು?” ಎಂದು ಖರ್ಗೆ ಪ್ರಶ್ನಿಸಿದರು.



