ನಿಮ್ಮ ಕಿಚನ್ನಲ್ಲಿ ಒಂದೇ ಒಂದು ಕಪ್ ಮೊಳಕೆ ಬಂದ ಹೆಸರುಕಾಳು ಇದ್ದರೆ ಸಾಕು, ಸಖತ್ ಕ್ರಿಸ್ಪಿ ದೋಸೆ ರೆಡಿ ಮಾಡಬಹುದು!
ಮೊಳಕೆ ಬಂದ ಹೆಸರುಕಾಳು
ಅಕ್ಕಿ ಹಿಟ್ಟು
ಹಸಿಮೆಣಸಿನಕಾಯಿ
ಶುಂಠಿ
ಜೀರಿಗೆ
ಕೊತ್ತಂಬರಿ ಸೊಪ್ಪು
ಉಪ್ಪು
ಎಣ್ಣೆ ಅಥವಾ ತುಪ್ಪ
ಮೊದಲಿಗೆ ಮಿಕ್ಸಿ ಜಾರ್ಗೆ ಮೊಳಕೆ ಕಾಳು, ಹಸಿಮೆಣಸಿನಕಾಯಿ, ಶುಂಠಿ, ಜೀರಿಗೆ, ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಆ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ಅಕ್ಕಿ ಹಿಟ್ಟು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಈಗ ಸ್ಟವ್ ಮೇಲೆ ದೋಸೆ ಕಾವಲಿ ಇಟ್ಟು ಬಿಸಿ ಮಾಡಿ. ಕಾವಲಿ ಬಿಸಿಯಾದ ಮೇಲೆ ಒಂದು ಸೌಟು ಹಿಟ್ಟು ಹಾಕಿ ತೆಳ್ಳಗೆ ಹರಡಿ. ಸುತ್ತಲೂ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ, ದೋಸೆ ಕ್ರಿಸ್ಪಿ ಆಗೋವರೆಗೂ ಮಧ್ಯಮ ಉರಿಯಲ್ಲಿ ಬೇಯಿಸಿ.
ಈಗ ಬಿಸಿಬಿಸಿಯಾದ, ಮೊಳಕೆ ಕಾಳಿನ ಗರಿಗರಿ ದೋಸೆ ಸವಿಯಲು ಸಿದ್ದ. ಇದಕ್ಕೆ ಖಾರ ಖಾರವಾದ ಕೆಂಪು ಚಟ್ನಿ ಅಥವಾ ತೆಂಗಿನಕಾಯಿ ಚಟ್ನಿ ಇದ್ದರೆ ಅಬ್ಬಾ.. ಆ ರುಚಿನೇ ಬೇರೆ!



