September 16, 2026
Wednesday, September 16, 2026
spot_img

ಅಯೋಧ್ಯೆಯಲ್ಲಿ ಬಿಗ್ ಬಿ ಹೊಸ ಪ್ಲಾನ್: ತಂದೆಯ ನೆನಪಿನಲ್ಲಿ ತಲೆಯೆತ್ತಲಿದೆ ಭವ್ಯ ಧರ್ಮಶಾಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅಯೋಧ್ಯೆಯಲ್ಲಿ ಸೈಟ್ ತಗೊಂಡಿರೋ ಸುದ್ದಿ ಕೆಲ ತಿಂಗಳ ಹಿಂದೆ ಭಾರೀ ಸದ್ದು ಮಾಡಿತ್ತು. ಈಗ ಆ ಜಾಗದಲ್ಲಿ ಬಿಗ್ ಬಿ ಏನು ಮಾಡೋಕೆ ಹೊರಟಿದ್ದಾರೆ ಗೊತ್ತಾ? ತಮ್ಮ ತಂದೆ, ಖ್ಯಾತ ಕವಿ ಡಾ. ಹರಿವಂಶ ರಾಯ್ ಬಚ್ಚನ್ ಅವರ ನೆನಪಿನಲ್ಲಿ ಅಯೋಧ್ಯೆಯಲ್ಲಿ ಒಂದು ಧರ್ಮಶಾಲೆ ಕಟ್ಟಿಸೋಕೆ ಪ್ಲಾನ್ ಮಾಡಿದ್ದಾರೆ.

ಅಯೋಧ್ಯೆಯ ದಶರಥ ಪಥದಲ್ಲಿರೋ ‘ದಿ ಸರಯೂ’ ಪ್ರಾಜೆಕ್ಟ್‌ನಲ್ಲಿ ಅಮಿತಾಭ್ ಬಚ್ಚನ್ ಸುಮಾರು 15 ಕೋಟಿ ರೂಪಾಯಿ ಕೊಟ್ಟು ಜಾಗ ತಗೊಂಡಿದ್ದರು. ಈಗ ಅಲ್ಲಿ 20ಕ್ಕೂ ಹೆಚ್ಚು ರೂಮ್‌ಗಳಿರೋ ದೊಡ್ಡ ಧರ್ಮಶಾಲೆ ಕಟ್ಟೋಕೆ ನಕ್ಷೆ ರೆಡಿ ಮಾಡಿ, ಅಯೋಧ್ಯಾ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪರ್ಮಿಷನ್ ಅರ್ಜಿ ಹಾಕಿದ್ದಾರೆ. ಪ್ರಾಧಿಕಾರದ ಉಪಾಧ್ಯಕ್ಷ ಅನುರಾಗ್ ಜೈನ್ ಕೂಡ ಈ ವಿಷಯವನ್ನು ಕನ್ಫರ್ಮ್ ಮಾಡಿದ್ದಾರೆ.

ಸದ್ಯಕ್ಕೆ ಪ್ಲಾನ್ ಬಗ್ಗೆ ಸಾರ್ವಜನಿಕರ ಆಕ್ಷೇಪಣೆ ಇದ್ಯಾ ಎಂದು ತಿಳ್ಕೊಳ್ಳೋಕೆ 15 ದಿನಗಳ ಟೈಮ್ ಕೊಟ್ಟು ನೋಟಿಸ್ ಬಿಟ್ಟಿದ್ದಾರೆ. ಎಲ್ಲವೂ ಅಂದುಕೊಂಡಂತೆ ಮುಗಿದರೆ, ಬರೋ ಅಕ್ಟೋಬರ್‌ನಲ್ಲೇ ಕಾಮಗಾರಿ ಶುರುವಾಗಲಿದೆ. ಅಯೋಧ್ಯೆಗೆ ಬರೋ ರಾಮಭಕ್ತರಿಗೆ ಉಳಿದುಕೊಳ್ಳೋಕೆ ಇದು ಒಳ್ಳೇ ಜಾಗ ಆಗಲಿದೆ.

ಹಿಂದಿ ಸಾಹಿತ್ಯದ ದಿಗ್ಗಜ, ಪದ್ಮಭೂಷಣ ಪ್ರಶಸ್ತಿ ವಿಜೇತ ಹರಿವಂಶ ರಾಯ್ ಬಚ್ಚನ್ ಅವರು ತಮ್ಮ ‘ಮಧುಶಾಲಾ’ ಕವನ ಸಂಕಲನ ಮತ್ತು ಶೇಕ್ಸ್‌ಪಿಯರ್ ನಾಟಕಗಳ ಹಿಂದಿ ಅನುವಾದಕ್ಕೆ ವಿಶ್ವಪ್ರಸಿದ್ಧರಾಗಿದ್ದವರು. ಇನ್ನು ಅಮಿತಾಭ್ ಅವರ ತಾಯಿ ತೇಜಿ ಬಚ್ಚನ್ ಅವರು ಪ್ರಸಿದ್ಧ ಸಮಾಜ ಸೇವಕಿ ಮತ್ತು ರಂಗಭೂಮಿ ಕಲಾವಿದೆಯಾಗಿದ್ದರು. ತಮ್ಮ ತಂದೆಯ ಸ್ಮರಣಾರ್ಥ ಬಿಗ್ ಬಿ ಮಾಡುತ್ತಿರೋ ಈ ಕಾರ್ಯಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !