September 16, 2026
Wednesday, September 16, 2026
spot_img

ಪಪ್ಪಾಯಿ ಹಣ್ಣಿನಿಂದ ಹೀಗೂ ಮಾಡಬಹುದಾ? ಸಿಂಪಲ್ ಆಂಡ್ ಸ್ವೀಟ್ ಹಲ್ವಾ ರೆಸಿಪಿ

ಹಣ್ಣಾದ ಪಪ್ಪಾಯಿ

ಸಕ್ಕರೆ

ತುಪ್ಪ

ಏಲಕ್ಕಿ ಪುಡಿ

ಗೋಡಂಬಿ, ದ್ರಾಕ್ಷಿ, ಬಾದಾಮಿ

ಮೊದಲು ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ, ಅದರಲ್ಲಿ ಗೋಡಂಬಿ, ದ್ರಾಕ್ಷಿ ಮತ್ತು ಬಾದಾಮಿಯನ್ನು ಹೊಂಬಣ್ಣ ಬರುವವರೆಗೆ ಹುರಿದು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ. ಅದೇ ಬಾಣಲೆಗೆ ಉಳಿದ ತುಪ್ಪ ಹಾಕಿ, ತುರಿದಿಟ್ಟುಕೊಂಡ ಪಪ್ಪಾಯಿಯನ್ನು ಸೇರಿಸಿ. ಸಣ್ಣ ಉರಿಯಲ್ಲಿ 5-7 ನಿಮಿಷ ಚೆನ್ನಾಗಿ ಹುರಿಯಿರಿ, ಅದರ ಹಸಿ ವಾಸನೆ ಸಂಪೂರ್ಣವಾಗಿ ಹೋಗಬೇಕು. ಪಪ್ಪಾಯಿ ಮೆತ್ತಗಾಗುತ್ತಿದ್ದಂತೆ ಅದಕ್ಕೆ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ. ಸಕ್ಕರೆ ಕರಗಿ ನೀರಾಗಿ, ಮಿಶ್ರಣ ಗಟ್ಟಿಯಾಗುವವರೆಗೆ ಕೈ ಆಡಿಸುತ್ತಿರಿ. ಮಿಶ್ರಣವು ಬಾಣಲೆಯನ್ನು ಬಿಟ್ಟು, ತುಪ್ಪ ಮೇಲಕ್ಕೆ ತೇಲಲು ಶುರುವಾದಾಗ ಏಲಕ್ಕಿ ಪುಡಿ ಮತ್ತು ಹುರಿದಿಟ್ಟುಕೊಂಡ ಗೋಡಂಬಿ-ದ್ರಾಕ್ಷಿ ಹಾಕಿ ಚೆನ್ನಾಗಿ ಕಲಸಿ.

ಈಗ ಗ್ಯಾಸ್ ಆಫ್ ಮಾಡಿ ಬಿಸಿಬಿಸಿಯಾಗಿ ಸರ್ವ್ ಮಾಡಿದ್ರೆ, ಸಕತ್ ರುಚಿಯಾದ ಪಪ್ಪಾಯಿ ಹಲ್ವಾ ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !