September 16, 2026
Wednesday, September 16, 2026
spot_img

Drinks | ಒಂದೇ ಗ್ಲಾಸ್ ಕುಡಿದ್ರೆ ಇಡೀ ದಿನ ಫುಲ್ ಎನರ್ಜಿ.. ರಿಚ್ & ಕ್ರೀಮಿ ಡ್ರೈ ಫ್ರೂಟ್ ಶರ್ಬತ್ ರೆಸಿಪಿ

ಬಾದಾಮಿ

ಗೋಡಂಬಿ

ಪಿಸ್ತಾ

ಒಣ ದ್ರಾಕ್ಷಿ

ಸಬ್ಜಾ ಬೀಜ

ಹಾಲು

ಸಕ್ಕರೆ ಅಥವಾ ಬೆಲ್ಲ

ಏಲಕ್ಕಿ ಪುಡಿ

ಕೆಸರಿ

ಮೊದಲಿಗೆ ಬಾದಾಮಿ, ಗೋಡಂಬಿ, ಪಿಸ್ತಾ ಮತ್ತು ದ್ರಾಕ್ಷಿಯನ್ನು ಕನಿಷ್ಠ 2-3 ಗಂಟೆ ನೀರಿನಲ್ಲಿ ನೆನೆಸಿಡಿ. ಬಾದಾಮಿ ಸಿಪ್ಪೆ ಸುಲಿದು ಇಟ್ಟುಕೊಳ್ಳಿ. ನೆನೆಸಿದ ಎಲ್ಲ ಡ್ರೈ ಫ್ರೂಟ್ಸ್ ಅನ್ನು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ಹಾಲು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಒಂದು ಬೌಲ್‌ನಲ್ಲಿ ತಣ್ಣಗಿರೋ ಹಾಲು ತಗೊಂಡು, ಅದಕ್ಕೆ ಈ ರುಬ್ಬಿದ ಡ್ರೈ ಫ್ರೂಟ್ಸ್ ಪೇಸ್ಟ್, ಸಕ್ಕರೆ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕರಗಿಸಿ. ಗ್ಲಾಸ್‌ಗೆ ಸ್ವಲ್ಪ ನೆನೆಸಿದ ಸಬ್ಜಾ ಬೀಜ ಹಾಕಿ, ಅದರ ಮೇಲೆ ಈ ಶರ್ಬತ್ ಹಾಕಿ, ಮೇಲಿಂದ ಐಸ್ ಕ್ಯೂಬ್ಸ್ ಮತ್ತೆ ಸಣ್ಣಗೆ ಹೆಚ್ಚಿದ ಪಿಸ್ತಾ-ಬಾದಾಮಿ ಹಾಕಿ ಕುಡಿಯೋಕೆ ಕೊಡಿ.

ದೇಹಕ್ಕೆ ತಂಪು, ಆರೋಗ್ಯಕ್ಕೂ ಜಬರ್ದಸ್ತ್ ಶಕ್ತಿ ಕೊಡುತ್ತೆ ಈ ಡ್ರೈ ಫ್ರೂಟ್ ಶರ್ಬತ್.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !