September 17, 2026
Thursday, September 17, 2026
spot_img

ಟ್ರೋಲರ್ಸ್‌ಗೆ ಸೋನಾಕ್ಷಿ ಸೈಲೆಂಟ್ ಶಾಕ್: ಕಮೆಂಟ್ ಸೆಕ್ಷನ್ ಆಫ್ ಮಾಡಿ ಗಣಪತಿ ಪೂಜೆ ವೀಡಿಯೋ ಶೇರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮತ್ತು ಅವರ ಪತಿ ಜಹೀರ್ ಇಕ್ಬಾಲ್ 2024ರಲ್ಲಿ ಮದುವೆಯಾದಾಗಿನಿಂದಲೂ ಇವರಿಬ್ಬರು ಒಂದಲ್ಲ ಒಂದು ಕಾರಣಕ್ಕೆ ಟ್ರೋಲ್ ಆಗ್ತಾನೆ ಇರ್ತಾರೆ. ಬೇರೆ ಧರ್ಮದವರನ್ನು ಮದುವೆಯಾಗಿದ್ದಾರೆ ಅನ್ನೋ ಒಂದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಇವರನ್ನು ಟ್ರೋಲ್ ಮಾಡಿದ್ದರು. ಆದರೆ ಈ ಜೋಡಿ ಮಾತ್ರ ಯಾವ ನೆಗೆಟಿವ್ ಕಮೆಂಟ್ಸ್‌ಗೂ ತಲೆ ಕೆಡಿಸಿಕೊಳ್ಳದೆ, ತಮ್ಮ ಪಾಡಿಗೆ ತಾವು ಖುಷಿಯಾಗಿ ಜೀವನ ಸಾಗಿಸ್ತಿದ್ದಾರೆ.

ಈಗ ವಿಷಯ ಏನಪ್ಪಾ ಅಂದ್ರೆ, ಇತ್ತೀಚೆಗೆ ಸೋನಾಕ್ಷಿ ಮತ್ತು ಜಹೀರ್ ಇಬ್ಬರೂ ಸೇರಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಅವರ ಮನೆಗೆ ಹೋಗಿದ್ದರು. ಅಲ್ಲಿ ಅರ್ಪಿತಾ ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಗೆ ಅತ್ಯಂತ ವಿಜೃಂಭಣೆಯಿಂದ ಪೂಜೆ ಸಲ್ಲಿಸಿ, ಇಬ್ಬರೂ ಜೊತೆಯಾಗಿ ನಿಂತು ಗಣಪತಿಯ ಆರತಿ ಬೆಳಗಿದ್ದಾರೆ. ಈ ದೃಶ್ಯಗಳಿರುವ ವೀಡಿಯೋವನ್ನು ಸೋನಾಕ್ಷಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

https://www.instagram.com/reel/DdWSXPnwsHb/?utm_source=ig_web_button_share_sheet

ಆದರೆ, ಈ ಬಾರಿ ಟ್ರೋಲರ್ಸ್‌ ಹಾಗೂ ನೆಗೆಟಿವ್ ಮನಸ್ಥಿತಿಯ ಜನರಿಗೆ ಕಿಂಚಿತ್ತೂ ಅವಕಾಶ ಕೊಡಬಾರದು ಎಂದು ನಿರ್ಧರಿಸಿದ ಈ ಜೋಡಿ, ಒಂದು ಮಾಸ್ಟರ್ ಪ್ಲಾನ್ ಮಾಡಿದೆ. ಈ ಪೂಜೆಯ ವೀಡಿಯೋ ಶೇರ್ ಮಾಡುತ್ತಿದ್ದಂತೆಯೇ ಆ ಪೋಸ್ಟ್‌ನ ‘ಕಮೆಂಟ್ ಸೆಕ್ಷನ್’ ಅನ್ನೇ ಸಂಪೂರ್ಣವಾಗಿ ಆಫ್ ಮಾಡಿಟ್ಟಿದ್ದಾರೆ. ಇದರಿಂದಾಗಿ ಕಿರಿಕಿರಿ ಉಂಟುಮಾಡುವ ಟ್ರೋಲರ್ಸ್‌ಗೆ ಬಾಯಿಮುಚ್ಚಿಸಿದಂತಾಗಿದ್ದು, ನೆಗೆಟಿವಿಟಿಯಿಂದ ದೂರ ಉಳಿದು ಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ಟ್ರೋಲ್‌ಗಳಿಗೆ ಕ್ಯಾರೇ ಅನ್ನದೇ, ತಮ್ಮದೇ ಶೈಲಿಯಲ್ಲಿ ಹಬ್ಬ ಆಚರಿಸಿ ಸಂಭ್ರಮಿಸಿರುವ ಈ ಜೋಡಿಯ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !