October 10, 2026
Saturday, October 10, 2026
spot_img

ಯಲ್ಲಾಪುರದಲ್ಲಿ ಬೆಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡುವಂತೆ ಆಗ್ರಹ: ನ.3ಕ್ಕೆ ಬೃಹತ್ ಪ್ರತಿಭಟನೆ

ಹೊಸದಿಗಂತ ವರದಿ ಯಲ್ಲಾಪುರ: 

ಬೆಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡುವಂತೆ ಆಗ್ರಹಿಸಿ ನವೆಂಬರ್ 3 ರಂದು ಯಲ್ಲಾಪುರದಲ್ಲಿ ಬೃಹತ್ ಪ್ರತಿಭಟನೆ, ಜಾಥಾ ಮತ್ತು ರಾಸ್ತಾ ರೋಕೋ ನಡೆಸಲು ನಿರ್ಧರಿಸಲಾಗಿದೆ ಎಂದು ಕೊಳ್ಳ ಸಂರಕ್ಷಣಾ ಸಮಿತಿಯ ಅನಂತ ಆಶೀಸರ್ ಹೇಳಿದರು.

ಗುರುವಾರ ಪಟ್ಟಣದ ಟಿ ಎಂ ಎಸ್ ಸಭಾಭವನದಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ನಡೆದ ವಿಶೇಷ ಸಮಾಲೋಚನೆ ಸಭೆ ಯಲ್ಲಿ ಮಾತನಾಡಿದರು. ಸರ್ವಪಕ್ಷ ಮುಖಂಡರು, ಸಹಕಾರಿ ಸಂಸ್ಥೆಗಳು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದ  ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸುಮಾರು 10 ಸಾವಿರ ಜನರನ್ನು ಸೇರಿಸಿ ಹೋರಾಟ ನಡೆಸುವ ಕುರಿತು ಎಚ್ಚರಿಸಲಾಯಿತು ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳು ಕೂಡಲೇ ಯೋಜನೆ ಕೈಬಿಡುವ ಘೋಷಣೆ ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಟಿ ಎಂ ಎಸ್ ಅಧ್ಯಕ್ಷ ಎನ್ ಕೆ ಭಟ್ ಅಗ್ಗಾ ಶಿಕುಂಬ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಮುಖರಾದ ಹರಿ ಪ್ರಕಾಶ ಕೋಣೆಮನೆ, ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ, ಉಮೇಶ ಭಾಗ್ವತ್, ಸುಬ್ಬಣ್ಣ ಕುಂಟೆಗಾಳಿ, ನರಸಿಂಹ ಕೋಣೆಮನೆ, ರಾಮ ಚಂದ್ರ ಚಿಕ್ಯಾನಮನೆ, ರಾಘವೇಂದ್ರ

Must Read