September 17, 2026
Thursday, September 17, 2026
spot_img

Snacks | ಸಂಜೆ ಸ್ನ್ಯಾಕ್ಸ್ ಗೆ ಏನಾದ್ರೂ ತಿನ್ನಬೇಕು ಅನಿಸ್ತಿದ್ಯಾ? ಟ್ರೈ ಮಾಡಿ ಕ್ರಿಸ್ಪಿ ನೂಡಲ್ಸ್ ಸಲಾಡ್

ನೂಡಲ್ಸ್

ಎಲೆಕೋಸು, ಕ್ಯಾರೆಟ್, ಕ್ಯಾಪ್ಸಿಕಂ

ಈರುಳ್ಳಿ, ಹಸಿಮೆಣಸಿನಕಾಯಿ

ಸೋಯಾ ಸಾಸ್, ರೆಡ್ ಚಿಲ್ಲಿ ಸಾಸ್, ಟೊಮೆಟೊ ಕೆಚಪ್

ನಿಂಬೆಹಣ್ಣಿನ ರಸ

ಕಡಲೆ ಬೀಜ, ಬಿಳಿ ಎಳ್ಳು

ಕೊತ್ತಂಬರಿ ಸೊಪ್ಪು

ಮೊದಲು ನೂಡಲ್ಸ್ ಅನ್ನು ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬರೋವರೆಗೂ ಚೆನ್ನಾಗಿ ಕರಿದು, ಒಂದು ಬೌಲ್‌ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ. ಇನ್ನೊಂದು ದೊಡ್ಡ ಬೌಲ್‌ಗೆ ಹೆಚ್ಚಿಟ್ಟುಕೊಂಡಿರೋ ಎಲೆಕೋಸು, ಕ್ಯಾರೆಟ್, ಕ್ಯಾಪ್ಸಿಕಂ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ. ಈಗ ಅದಕ್ಕೆ ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೊ ಕೆಚಪ್, ಉಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಕಲಿಸಿ. ಲಾಸ್ಟ್‌ನಲ್ಲಿ ಕರಿದಿಟ್ಟಿರೋ ಕ್ರಿಸ್ಪಿ ನೂಡಲ್ಸ್, ಹುರಿದ ಕಡಲೆ ಬೀಜ, ಎಳ್ಳು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಒಂದ್ಸಲ ಮಿಕ್ಸ್ ಮಾಡಿದ್ರೆ, ನಾಲಿಗೆಗೆ ರುಚಿಕೊಡುವ ಕ್ರಿಸ್ಪಿ ನೂಡಲ್ಸ್ ಸಲಾಡ್ ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !