ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಅಂದ್ಮೇಲೆ ಡ್ರಾಮಾಗೆ ಏನೂ ಕಮ್ಮಿ ಇರಲ್ಲ. ಅದರಲ್ಲೂ ಸೋಶಿಯಲ್ ಮೀಡಿಯಾ ಬಂದ್ಮೇಲಂತೂ ಯಾರು ಯಾರಿಗೆ ಲಿಂಕ್ ಮಾಡ್ತಾರೋ, ಯಾವ ವಿಡಿಯೋ ಎಲ್ಲಿಗೆ ತಗೊಂಡು ಹೋಗ್ತಾರೋ ಗೊತ್ತಾಗಲ್ಲ. ಸಲ್ಮಾನ್ ಖಾನ್ ಪ್ರೊಡಕ್ಷನ್ ಹೌಸ್ ಸಂಗೀತ ನಿರ್ದೇಶಕ ಅಮಾಲ್ ಮಲ್ಲಿಕ್ ಹೆಸರು ಹಾಕಿ ‘ಮೇನ್ ಹೂನ್ ಹೀರೋ ತೇರಾ’ ಹಾಡಿನ ಕ್ರೆಡಿಟ್ ಪೋಸ್ಟ್ ಮಾಡಿತ್ತು. ಈ ವಿವಾದ ಸಖತ್ ಸೌಂಡ್ ಮಾಡ್ತಿರುವಾಗಲೇ, ಇಂಟರ್ನೆಟ್‌ನಲ್ಲಿ ಇನ್ನೊಂದು ವಿಡಿಯೋ ಹರಿದಾಡೋಕೆ ಶುರುವಾಯ್ತು.
ಆ ವಿಡಿಯೋದಲ್ಲಿ ಏನಿದೆ ಅಂದ್ರೆ, ಸಲ್ಮಾನ್ ಖಾನ್ ಟಿವಿಯಲ್ಲಿ ತಮ್ಮದೇ ‘ಮೇನ್ ಹೂನ್ ಹೀರೋ ತೇರಾ’ ಹಾಡನ್ನ ಹಾಡ್ತಿದ್ದಾರೆ. ತಕ್ಷಣ ಕಟ್ ಮಾಡಿದ್ರೆ, ಇನ್ನೊಂದ್ ಕಡೆ ಸೋನು ನಿಗಮ್ ಅವರು ಮುಖ ಮುರಿಯುತ್ತಾ, “ತುಂಬಾ ದಿನಗಳ ನಂತ್ರ ಒಳ್ಳೆ ಹಾಡು ಕೇಳಿ ತಲೆ ಕೆಟ್ಟುಹೋಯ್ತು, ಯಾರಾದ್ರೂ ಹೀಗೆ ಹಾಡಿದ್ರೆ ನನಗೆ ಅಳು ಬಂದ್ಬಿಡುತ್ತೆ” ಎಂದು ಡೈಲಾಗ್ ಹೊಡಿಯೋ ತರ ಎಡಿಟ್ ಮಾಡಿದ್ದಾರೆ. ಕ್ಯಾಪ್ಷನ್‌ನಲ್ಲಂತೂ, ‘ಸೋನು ನಿಗಮ್‌ರಿಂದ ಸಲ್ಮಾನ್ ಖಾನ್ ಸಿಂಗಿಂಗ್ ರೋಸ್ಟ್’ ಎಂದು ಬರೆಯಲಾಗಿತ್ತು.
ಜನ ಕೂಡ “ಅಯ್ಯೋ! ಸೋನು ನಿಗಮ್ ನೇರವಾಗಿ ಸಲ್ಮಾನ್‌ಗೆ ಕಾಲೆಳೆದ್ಬಿಟ್ರಾ?” ಎಂದು ವಿಡಿಯೋ ಶೇರ್ ಮಾಡಿ ವೈರಲ್ ಮಾಡಿಬಿಟ್ಟರು.
https://www.instagram.com/p/DdYJdAQGey4/?utm_source=ig_web_button_share_sheet
ವಿಷಯ ಸೋನು ನಿಗಮ್ ಅವರ ಗಮನಕ್ಕೆ ಹೋಗಿದ್ದೇ ತಡ, ಅವರು ಸುಮ್ಮನೆ ಕೂರಲಿಲ್ಲ. ಆ ಎಡಿಟೆಡ್ ವಿಡಿಯೋನಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲೇ ಮರು-ಪೋಸ್ಟ್ ಮಾಡಿ ಅಸಲಿ ಸತ್ಯ ಏನು ಎಂದು ಬಿಚ್ಚಿಟ್ಟಿದ್ದಾರೆ.
“ಇಂಟರ್ನೆಟ್‌ನಲ್ಲಿ ಏನೇನ್ ನೋಡಬೇಕೋ ಬಾಪ್ ರೇ! ಕಣ್ಣು ಬಾಯಿ ಮುಚ್ಚಿಕೊಂಡು ಏನೇನೋ ಎಡಿಟ್ ಮಾಡ್ತಾರೆ. ನಾನು ಈ ರೀತಿ ರಿಯಾಕ್ಟ್ ಮಾಡಿದ್ದು ಸಲ್ಮಾನ್ ಖಾನ್‌ಗಲ್ಲ, ಪಾಕಿಸ್ತಾನದ ಒಬ್ಬ ಪುಟ್ಟ ಹುಡುಗಿಯ ಅದ್ಭುತ ಹಾಡಿಗೆ!” ಎಂದು ಶಾಕಿಂಗ್ ಎಮೋಜಿ ಹಾಕಿ ಕ್ಲಾರಿಟಿ ಕೊಟ್ಟಿದ್ದಾರೆ.
ಇದೇ ವಿಚಾರವಾಗಿ ಗಾಯಕ ಅನೀಶ್ ಮ್ಯಾಥ್ಯೂ ಕೂಡ ಕಮೆಂಟ್ ಮಾಡಿ ವಿಷಯ ನೆನಪಿಸಿದ್ದಾರೆ. 2020ರಲ್ಲಿ ಕೋಕ್ ಸ್ಟುಡಿಯೋ ಮಾದರಿಯ ‘ನೆಸ್ ಕೆಫೆ ಬೇಸ್‌ಮೆಂಟ್’ ಶೋನಲ್ಲಿ ಹಾದಿಯಾ ಹಾಶ್ಮಿ ಅನ್ನೋ ಪಾಕಿಸ್ತಾನದ ಪುಟ್ಟ ಹುಡುಗಿ ‘ಬೋಲ್ ಹೂ’ ಅನ್ನೋ ಸೂಫಿ ಹಾಡನ್ನು ಅದ್ಭುತವಾಗಿ ಹಾಡಿದ್ದಳು. ಆ ಹಾಡನ್ನು ನಟ ಜಾವೇದ್ ಜಾಫ್ರಿ ಅವರು ಸೋನು ನಿಗಮ್‌ಗೆ ಕಳುಹಿಸಿಕೊಟ್ಟಿದ್ದರಂತೆ. ಆ ಮಗುವಿನ ದ್ವನಿ ಕೇಳಿ ಸೋನು ನಿಗಮ್ ನಿಜವಾಗಿಯೂ ಭಾವುಕರಾಗಿ, ಕಣ್ಣೀರು ಹಾಕಿ, ಆ ಮಗುವಿನ ಪ್ರತಿಭೆಯನ್ನು ಮನಸಾರೆ ಹೊಗಳಿ ಒಂದು ವಿಡಿಯೋ ಮಾಡಿದ್ದರು.
ಆದರೆ, ಇಂಟರ್ನೆಟ್ ಕಿಡಿಗೇಡಿಗಳು ಆ ವಿಡಿಯೋದಲ್ಲಿದ್ದ ಸೋನು ಅವರ ಭಾವುಕ ರಿಯಾಕ್ಷನ್ ಅನ್ನು ಮಾತ್ರ ಕಟ್ ಮಾಡಿ, ಸಲ್ಮಾನ್ ಖಾನ್ ಹಾಡುವ ವಿಡಿಯೋಗೆ ತಂದು ಎಡಿಟ್ ಮಾಡಿದ್ದಾರೆ.
ಸದ್ಯಕ್ಕೆ ಸೋನು ನಿಗಮ್ ಸತ್ಯ ಏನೆಂದು ತಿಳಿಸಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ. “ಸೋಶಿಯಲ್ ಮೀಡಿಯಾದಲ್ಲಿ ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡು” ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.



