October 9, 2026
Friday, October 9, 2026
spot_img

‘ಕೇಂದ್ರ ಸಚಿವರಿಗೆ ಪಿಕ್‌ಪಾಕೆಟ್‌ನಲ್ಲಿ ಪಿಎಚ್‌ಡಿ ನೀಡಬೇಕು’: ಯುಪಿಐ ಶುಲ್ಕ ನೀತಿ ವಿರುದ್ಧ ಸಿಎಂ ಡಿಕೆಶಿ ವಾಗ್ದಾಳಿ

ಹೊಸದಿಗಂತ ವರದಿ ಕಲಬುರಗಿ:

ಯುಪಿಐ ಪಾವತಿಗೆ ವರ್ತಕರ ಮೇಲೆ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರವಾಗಿ ಟೀಕಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕೇಂದ್ರ ಸರ್ಕಾರ ಜನಸಾಮಾನ್ಯರ ಹೊಸ ಪಿಕ್‌ಪಾಕೆಟ್‌ಗೆ ಮುಂದಾಗಿದೆ. ಶಿಕ್ಷಕರಿಗೆ Tr. ಎಂಜಿನಿಯರ್‌ಗಳಿಗೆ Er. ಪದನಾಮ ನೀಡುವಂತೆ ಕೇಂದ್ರದ ಎಲ್ಲ ಸಚಿವರಿಗೂ ಪಿಕ್‌ಪಾಕೆಟ್‌ನಲ್ಲಿ ಪಿಎಚ್‌ಡಿ ನೀಡಬೇಕು ಎಂದು ವ್ಯಂಗ್ಯವಾಡಿದರು.

ಯುಪಿಐ ಶುಲ್ಕದ ಹೊರೆ ಕೊನೆಗೆ ವರ್ತಕರು ಗ್ರಾಹಕರ ಮೇಲೆ ಹಾಕಲಿದ್ದಾರೆ. ವಿದೇಶಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು ಇಂತಹ ತೀರ್ಮಾನ ಕೈಗೊಳ್ಳಲಾಗಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ. ‘ಕ್ಯಾಶ್‌ಲೆಸ್‌ ಇಂಡಿಯಾ’ ಎಂದು ಹೇಳಿ ನೋಟು ಅಮಾನ್ಯೀಕರಣ ಮಾಡಿದವರು ಈಗ ಮತ್ತೆ ಹಳೆಯ ಪದ್ಧತಿಯತ್ತ ಕೊಂಡೊಯ್ಯುವಂತಾಗಿದೆ. ಯುಪಿಐ ಶುಲ್ಕದ ನಿರ್ಧಾರವನ್ನು ಹಿಂಪಡೆದು ಹಿಂದಿನ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:

ಬಿಜೆಪಿಗೆ ರಾಜಕೀಯವೇ ಮುಖ್ಯ

ಬಿಜೆಪಿಯವರಿಗೆ ರಾಜಕೀಯವೇ ಮುಖ್ಯವಾಗಿದ್ದು, ರೈತರು ಮತ್ತು ಬಡವರ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ ಎಂದು ಡಿಕೆ ಶಿವಕುಮಾರ್ ಆರೋಪಿಸಿದರು. ವಿಧಾನಮಂಡಲದ ಅಧಿವೇಶನ ನಡೆಸಲು ವಿರೋಧ ಪಕ್ಷ ಅವಕಾಶ ನೀಡಲಿಲ್ಲ. ಕಸ್ತೂರಿ ರಂಗನ್ ವರದಿ, ಬರಗಾಲ ಹಾಗೂ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ. ವಿರೋಧ ಪಕ್ಷದವರು ಏನೇ ಮಾಡಿದರೂ ನಾವು ಚರ್ಚೆಗೆ ಸಿದ್ಧ. ಚರ್ಚೆಗೆ ಅವಕಾಶ ಕಲ್ಪಿಸಿಕೊಳ್ಳುವಷ್ಟು ನಮಗೂ ಅರಿವಿದೆ ಎಂದು ಹೇಳಿದರು.

Must Read