ಸಾಮಾಗ್ರಿಗಳು
ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಉದ್ದಿನಬೇಳೆ
ಕರಿಬೇವು
ಹಿಂಗ್
ಹಸಿಮೆಣಸು
ಈರುಳ್ಳಿ
ಟೊಮ್ಯಾಟೊ
ಖಾರದಪುಡಿ
ಗರಂ ಮಸಾಲಾ
ಸಾಂಬಾರ್ ಪುಡಿ
ಬೆಲ್ಲ
ಹುಣಸೆಹುಳಿ
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಸಾಸಿವೆ ಜೀರಿಗೆ ಕಡ್ಲೆಬೇಳೆ ಉದ್ದಿನಬೇಳೆ ಕರಿಬೇವು, ಜಜ್ಜಿದ ಬೆಳ್ಳುಳ್ಳಿ ಹಾಕಿ ಮಿಕ್ಸ್ ಮಾಡಿ
ಆನಂತರ ಒಂದು ಹಸಿಮೆಣಸು, ಈರುಳ್ಳಿ ಉಪ್ಪು ಹಾಕಿ ಐದು ನಿಮಿಷ ಬಿಡಿ
ಈರುಳ್ಳಿ ಬೆಂದ ನಂತರ ಟೊಮ್ಯಾಟೊ ಹಾಗೂ ಅರಿಶಿಣ ಪುಡಿ ಹಾಕಿ ಬಾಡಿಸಿ
ಟೊಮ್ಯಾಟೊ ಸಾಫ್ಟ್ ಆಗೋದಕ್ಕೆ ಸ್ವಲ್ಪ ನೀರು ಹಾಕಿ.
ನಂತರ ಹುಣಸೆಹುಳಿ ಹಾಗೂ ಬೆಲ್ಲದ ಮಿಶ್ರಣ ಹಾಕಿ, ಬೇಯಲು ಬಿಡಿ
ಟೊಮ್ಯಾಟೊ ಬೆಂದ ನಂತರ ಖಾರದಪುಡಿ, ಸಾಂಬಾರ್ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿದ್ರೆ ಗೊಜ್ಜು ರೆಡಿ



