September 19, 2026
Saturday, September 19, 2026
spot_img

ಕೇವಲ 1 ಕೋಟಿಗೆ ಸುಸ್ತಾದ ‘ದಾಯ್ರಾ’.. ವೀಕೆಂಡ್‌ನಲ್ಲಾದರೂ ಚೇತರಿಸಿಕೊಳ್ಳುತ್ತಾ ಸಿನಿಮಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನ ಬಹುನಿರೀಕ್ಷಿತ ‘ದಾಯ್ರಾ’ ಸಿನಿಮಾ ಶುಕ್ರವಾರವಷ್ಟೇ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿತ್ತು. ಆದರೆ ಮೊದಲ ದಿನದ ಬಾಕ್ಸ್ ಆಫೀಸ್ ರಿಪೋರ್ಟ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ದೊಡ್ಡ ಮಟ್ಟದ ಹೈಪ್ ಇಲ್ಲದೆ ರಿಲೀಸ್ ಆದ ಈ ಸಿನಿಮಾ, ಇಂಡಿಯನ್ ಬಾಕ್ಸ್ ಆಫೀಸ್‌ನಲ್ಲಿ ಕೇವಲ 1 ಕೋಟಿ ರೂಪಾಯಿ ಗಳಿಸುವ ಮೂಲಕ ತೀರಾ ಸೈಲೆಂಟ್ ಆಗಿ ಖಾತೆ ತೆರೆದಿದೆ.

ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ ಹಾಗೂ ಮಲಯಾಳಂ ಸೂಪರ್‌ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಭೂಮಿಕೆಯಲ್ಲಿದ್ದಾರೆ ಅಂದಮೇಲೆ ಕಲೆಕ್ಷನ್ ಧೂಳೆಬ್ಬಿಸುತ್ತೆ ಎಂದು ಪ್ರೇಕ್ಷಕರು ಅಂದುಕೊಂಡಿದ್ದರು. ಆದರೆ, ಮೊದಲ ದಿನ ಶುಕ್ರವಾರದ ಕಲೆಕ್ಷನ್ ಲೆಕ್ಕಾಚಾರ ನೋಡಿದರೆ ‘ದಾಯ್ರಾ’ಗೆ ಬಾಕ್ಸ್ ಆಫೀಸ್ ಅಖಾಡದಲ್ಲಿ ದೊಡ್ಡ ಮಟ್ಟದ ಸವಾಲು ಎದುರಾಗಿದೆ. ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ನೆಲೆನಿಲ್ಲಬೇಕಾದರೆ ಇನ್ನುಳಿದ ವೀಕೆಂಡ್ ದಿನಗಳಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಬೆಕಾಗಿದೆ .

ಏನಿದು ‘ದಾಯ್ರಾ’ ಕಥೆ?

ಇನ್ನು ಈ ಸಿನಿಮಾದ ಕಥೆಯ ವಿಷಯಕ್ಕೆ ಬಂದರೆ, ಇದು ಕಂಪ್ಲೀಟ್ ಪೊಲೀಸ್ ಸಿಸ್ಟಮ್ ಮತ್ತು ಕಾನೂನಿನ ಮಧ್ಯೆ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್. ಒಂದು ಹೈಪ್ರೊಫೈಲ್ ಕ್ರೈಮ್ ಇನ್ಸಿಡೆಂಟ್ ನಡೆದ ಮೇಲೆ, ಆಫೀಸರ್ ರಾಮನ್ ಕುಮಾರ್ ಮತ್ತು ಅವರ ಟೀಮ್ ಆರೋಪಿಗಳ ವಿರುದ್ಧ ಒಂದು ಕಾಂಟ್ರೋವರ್ಷಿಯಲ್ ಎನ್‌ಕೌಂಟರ್ ಮಾಡಿಬಿಡುತ್ತಾರೆ. ಆದರೆ, ಆ ಎನ್‌ಕೌಂಟರ್ ನಿಜವೇ ಅಥವಾ ಪ್ಲ್ಯಾನ್ ಮಾಡಿ ಮಾಡಿದ ಫೇಕ್ ಶೂಟೌಟಾ? ಎಂದು ತನಿಖೆ ಮಾಡಲು ಅಜೂನಿ ಕೊಹ್ಲಿ ಅನ್ನೋ ಮತ್ತೊಬ್ಬ ಖಡಕ್ ಆಫೀಸರ್ ಎಂಟ್ರಿ ಕೊಡುತ್ತಾರೆ. ಇಲ್ಲಿಂದ ಎರಡು ವಿಚಾರಗಳ ಮಧ್ಯೆ ಸಿಸ್ಟಮ್ಯಾಟಿಕ್ ವಾರ್ ಶುರುವಾಗುತ್ತದೆ.

ಮೇಘನಾ ಗುಲ್ಜಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ಕರೀನಾ ಮತ್ತು ಪೃಥ್ವಿರಾಜ್ ಜೋಡಿಯ ಪರ್ಫಾರ್ಮೆನ್ಸ್ ಭೇಷ್ ಎನಿಸಿಕೊಂಡಿದ್ದರೂ, ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವಲ್ಲಿ ಚಿತ್ರತಂಡ ಕೊಂಚ ಎಡವಿದಂತೆ ಕಾಣುತ್ತಿದೆ.

ವೀಕೆಂಡ್‌ನಲ್ಲಿ ಕರೀನಾ-ಪೃಥ್ವಿರಾಜ್ ಕಾಂಬಿನೇಷನ್ ಮ್ಯಾಜಿಕ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಕಂಬ್ಯಾಕ್ ಮಾಡುತ್ತಾ? ಅಥವಾ ಕಲೆಕ್ಷನ್ ಇಲ್ಲದೆ ಸುಸ್ತಾಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !