September 19, 2026
Saturday, September 19, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 93 | ದಿನಾ ಒಂದೇ ತರ ತಿಂಡಿ ತಿಂದು ಬೇಜಾರಾಗಿದ್ರೆ, ಇವತ್ತು ಈ ತರಕಾರಿ ಅವಲಕ್ಕಿ ಉಸ್ಲಿ ಟ್ರೈ ಮಾಡಿ

ಬೆಳಗ್ಗಿನ ಗಡಿಬಿಡಿಯಲ್ಲಿ ಕಿಚನ್‌ನಲ್ಲಿ ಗಂಟೆಗಟ್ಟಲೆ ನಿಲ್ಲಲು ಯಾರಿಗೂ ಇಷ್ಟವಿರುವುದಿಲ್ಲ. ಅಂತಹ ಸಮಯದಲ್ಲಿ ಮನೆಯವರ ಹೊಟ್ಟೆಯೂ ತುಂಬಬೇಕು, ಆರೋಗ್ಯಕ್ಕೂ ಒಳ್ಳೆಯದಾಗಿರಬೇಕು ಅಂದ್ರೆ ಈ ತರಕಾರಿ ಅವಲಕ್ಕಿ ಉಸ್ಲಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ಗಟ್ಟಿ ಅವಲಕ್ಕಿ

ಈರುಳ್ಳಿ, ಆಲೂಗಡ್ಡೆ,ಕ್ಯಾರೆಟ್,

ಹಸಿರು ಬಟಾಣಿ, ಬೀನ್ಸ್

ಕಡಲೇಕಾಯಿ ಬೀಜ

ಹಸಿಮೆಣಸಿನಕಾಯಿ

ಸಾಸಿವೆ, ಜೀರಿಗೆ, ಉದ್ದಿನಬೇಳೆ

ಎಣ್ಣೆ, ಅರಿಶಿನ ಪುಡಿ

ಕರಿಬೇವು, ಕೊತ್ತಂಬರಿ ಸೊಪ್ಪು

ನಿಂಬೆಹಣ್ಣಿನ ರಸ, ಉಪ್ಪು

ಮಾಡುವ ವಿಧಾನ

ಮೊದಲು 2 ಕಪ್ ಗಟ್ಟಿ ಅವಲಕ್ಕಿಯನ್ನು ನೀರಿನಲ್ಲಿ 2 ಬಾರಿ ಚೆನ್ನಾಗಿ ತೊಳೆದು ಅದಕ್ಕೆ ಕಾಲು ಚಮಚ ಅರಿಶಿನ ಮತ್ತು ಅರ್ಧ ಚಮಚ ಉಪ್ಪು ಹಾಕಿ ಮಿಕ್ಸ್ ಮಾಡಿ 10 ನಿಮಿಷ ಪಕ್ಕಕ್ಕೆ ಇಡಬೇಕು. ನಂತರ ಬಾಣಲೆಯಲ್ಲಿ 2-3 ಚಮಚ ಎಣ್ಣೆ ಕಾಯಿಸಿ, ಮೊದಲು 2 ಚಮಚ ಕಡಲೇಕಾಯಿ ಬೀಜ ಹಾಕಿ ಗರಿಗರಿಯಾಗುವಂತೆ ಹುರಿದು, ಅದೇ ಎಣ್ಣೆಗೆ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕರಿಬೇವು ಹಸಿಮೆಣಸಿನಕಾಯಿ ಮತ್ತು ಹೆಚ್ಚಿದ ಈರುಳ್ಳಿ ಹಾಕಿ ಅದು ಬಣ್ಣ ಬದಲಾಗುವವರೆಗೆ ಬಾಡಿಸಬೇಕು.

ಬಳಿಕ ಸಣ್ಣಗೆ ಹೆಚ್ಚಿದ ಆಲೂಗಡ್ಡೆ, ಕ್ಯಾರೆಟ್, ಹಸಿರು ಬಟಾಣಿ ಸೇರಿಸಿ ಮಿಕ್ಸ್ ಮಾಡಿ 2 ಚಮಚ ನೀರು ಹಾಕಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 3-4 ನಿಮಿಷ ಬೇಯಲು ಬಿಡಬೇಕು. ನಂತರ ಅವಲಕ್ಕಿ ಮತ್ತು ಹುರಿದ ಶೇಂಗಾವನ್ನು ಹಾಕಿ ಕೊನೆಯದಾಗಿ, ಕೊತ್ತಂಬರಿ ಸೊಪ್ಪು ಮತ್ತು 1 ಚಮಚ ನಿಂಬೆಹಣ್ಣಿನ ರಸ ಹಿಂಡಿದರೆ ಬಿಸಿಬಿಸಿ ತರಕಾರಿ ಅವಲಕ್ಕಿ ಉಸ್ಲಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !