September 19, 2026
Saturday, September 19, 2026
spot_img

ನೆಗಡಿ-ಕೆಮ್ಮಿಗೆ ಪವರ್‌ಫುಲ್ ಟ್ರಿಕ್.. ಸೂಪರ್ ಹೋಮ್ ಮೇಡ್ ಶುಂಠಿ ಕ್ಯಾಂಡಿ ರೆಸಿಪಿ!

ಶುಂಠಿ

ಬೆಲ್ಲ

ನಿಂಬೆಹಣ್ಣಿನ ರಸ

ಪೆಪ್ಪರ್ ಪೌಡರ್

ತುಪ್ಪ

ಮೊದಲು ಶುಂಠಿ ಸಿಪ್ಪೆ ತೆಗೆದು, ನೀಟಾಗಿ ತೊಳೆದು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಈಗ ಒಂದು ಬಾಣಲೆಗೆ ಜಜ್ಜಿದ ಬೆಲ್ಲ ಮತ್ತು ಶುಂಠಿ ಪೇಸ್ಟ್ ಹಾಕಿ ಮೀಡಿಯಂ ಉರಿಯಲ್ಲಿ ಚೆನ್ನಾಗಿ ಕೈಯಾಡಿಸಿ. ಬೆಲ್ಲ ಕರಗಿ ಪಾಕ ಗಟ್ಟಿಯಾಗಲು ಶುರುವಾದಾಗ ನಿಂಬೆ ರಸ, ಪೆಪ್ಪರ್ ಪೌಡರ್ ಮತ್ತು ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣ ಬಾಣಲೆ ಬಿಟ್ಟು ಉಂಡೆಯಂತಾಗುವಾಗ, ಗ್ಯಾಸ್ ಆಫ್ ಮಾಡಿ. ಒಂದು ತಟ್ಟೆಗೆ ಸ್ವಲ್ಪ ತುಪ್ಪ ಸವರಿ, ಈ ಬಿಸಿ ಮಿಶ್ರಣವನ್ನು ಸಣ್ಣ ಸಣ್ಣ ಕ್ಯಾಂಡಿ ಶೇಪ್‌ನಲ್ಲಿ ಹಾಕಿ. ತಣ್ಣಗಾದ ಮೇಲೆ ಖಾರ-ಸಿಹಿಯಾದ ಶುಂಠಿ ಕ್ಯಾಂಡಿ ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !