ಆಲೂಗಡ್ಡೆ
ಹಸಿ ಬಟಾಣಿ
ಈರುಳ್ಳಿ & ಟೊಮೆಟೊ
ಹಸಿಮೆಣಸಿನಕಾಯಿ
ಚಾಟ್ ಮಸಾಲ, ಅಚ್ಚಖಾರದ ಪುಡಿ, ಜೀರಿಗೆ ಪುಡಿ
ಹುಣಸೆಹಣ್ಣಿನ ಚಟ್ನಿ & ಪುದೀನಾ ಚಟ್ನಿ
ಸೇವ್ & ಕೊತ್ತಂಬರಿ ಸೊಪ್ಪು
ನಿಂಬೆಹಣ್ಣಿನ ರಸ & ಉಪ್ಪು
ಮೊದಲು ಒಂದು ಪಾತ್ರೆಯಲ್ಲಿ ಬೇಯಿಸಿದ ಆಲೂಗಡ್ಡೆ ಮತ್ತು ಬಟಾಣಿಯನ್ನು ಮ್ಯಾಶ್ ಮಾಡಿಕೊಳ್ಳಿ. ಅದಕ್ಕೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಿಸಿ. ಈಗ ಪುದೀನಾ ಖಾರ ಚಟ್ನಿ ಮತ್ತು ಸಿಹಿ ಹುಣಸೆಹಣ್ಣಿನ ಚಟ್ನಿ ಸೇರಿಸಿ, ಸ್ವಲ್ಪ ನಿಂಬೆರಸ ಹಿಂಡಿ ಮಿಕ್ಸ್ ಮಾಡಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಗರಿಗರಿ ಸೇವ್ ಉದುರಿಸಿದರೆ, ಬಾಯಲ್ಲಿ ನೀರೂರಿಸುವ ‘ಆಲೂ ಮಟರ್ ಚಾಟ್’ ತಿನ್ನಲು ರೆಡಿ!



