September 20, 2026
Sunday, September 20, 2026
spot_img

ಬ್ಯಾಟರ್‌ಗಳ ಅಬ್ಬರ, ಬೌಲರ್‌ಗಳ ಆರ್ಭಟ: ಒಂದೇ ತಿಂಗಳಲ್ಲಿ 3 ಸರಣಿ, ಫ್ಯಾನ್ಸ್‌ಗೆ ಭರಪೂರ ಕ್ರಿಕೆಟ್ ರಸದೌತಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಯನ್ನು ಗೆದ್ದುಬೀಗಿರೋ ಟೀಮ್ ಇಂಡಿಯಾ, ಈಗ ಮುಂದಿನ ದೊಡ್ಡ ಬೇಟೆಗಾಗಿ ಬ್ಯಾಟ್ ಹಿಡಿದು ನಿಂತಿದೆ. ಈ ಬಾರಿ ಎದುರಾಳಿ ಬೇರೆ ಯಾರೂ ಅಲ್ಲ, ವೆಸ್ಟ್ ಇಂಡೀಸ್ ಪಡೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ, ಈ ಬಾರಿ ವಿಂಡೀಸ್ ಜೊತೆ ದ್ವಿಪಕ್ಷೀಯ ಸರಣಿ ಅಷ್ಟೇ ಅಲ್ಲ, ಅದರ ಮಧ್ಯದಲ್ಲೇ ಭಾರತ ತಂಡ ಮತ್ತೊಂದು ಕಡೆ ಪ್ರತ್ಯೇಕ ಪಂದ್ಯ ಹಾಗೂ ಏಷ್ಯನ್ ಗೇಮ್ಸ್‌ನಂತಹ ದೊಡ್ಡ ಟೂರ್ನಿಯಲ್ಲೂ ಕಣಕ್ಕಿಳಿಯುತ್ತಿದೆ. ಅಂದರೆ ಕ್ರಿಕೆಟ್ ಪ್ರೇಮಿಗಳಿಗೆ ಈ ಇಡೀ ತಿಂಗಳು ಫುಲ್ ಜೋಶ್, ಫುಲ್ ಎಂಟರ್‌ಟೈನ್‌ಮೆಂಟ್ ಖಚಿತ.

ವೆಸ್ಟ್ ಇಂಡೀಸ್ ವಿರುದ್ಧದ ಮಹಾಸಂಗ್ರಾಮ ಶುರುವಾಗುವುದಕ್ಕೂ ಮುನ್ನವೇ ಸೆಪ್ಟೆಂಬರ್ 22 ರಂದು ಟೀಮ್ ಇಂಡಿಯಾ ಜಪಾನ್ ವಿರುದ್ಧ ಏಕೈಕ ಟಿ20 ಪಂದ್ಯವನ್ನು ಆಡಲಿದೆ. ವಿಶ್ವ ಕ್ರಿಕೆಟ್‌ನಲ್ಲಿ ಜಪಾನ್ ತಂಡಕ್ಕೆ ಭಾರತದಂತಹ ದೈತ್ಯ ತಂಡದ ವಿರುದ್ಧ ಆಡುವುದೆಂದರೆ ಸಣ್ಣ ಮಾತಲ್ಲ. ಕ್ರಿಕೆಟ್ ಜಗತ್ತಿನ ಕಣ್ಣು ಈ ಪಂದ್ಯದ ಮೇಲಿದ್ದು, ಯುವ ಆಟಗಾರರಿಗೆ ತಮ್ಮ ತಾಕತ್ತು ತೋರಿಸಲು ಇದೊಂದು ಸೂಪರ್ ಪ್ಲಾಟ್‌ಫಾರ್ಮ್ ಆಗಿದೆ.

ಜಪಾನ್ ಎದುರಿನ ಪಂದ್ಯ ಮುಗಿಯುತ್ತಿದ್ದಂತೆಯೇ ಕ್ಯಾರಿಬಿಯನ್ ಪಡೆ ಭಾರತಕ್ಕೆ ಕಾಲಿಡಲಿದೆ. ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 17 ರವರೆಗೆ ನಡೆಯಲಿರುವ ಈ ಪ್ರವಾಸದಲ್ಲಿ ಒಟ್ಟು 3 ಏಕದಿನ ಮತ್ತು 5 ಟಿ20 ಪಂದ್ಯಗಳ ರೋಮಾಂಚಕ ಹಣಾಹಣಿ ನಡೆಯಲಿದೆ.

ಇತ್ತ ವಿಂಡೀಸ್ ವಿರುದ್ಧ ಏಕದಿನ ಸರಣಿ ನಡೆಯುತ್ತಿರುವ ಬೆನ್ನಲ್ಲೇ ಸೆಪ್ಟೆಂಬರ್ 28 ರಿಂದ ಏಷ್ಯನ್ ಗೇಮ್ಸ್ ಟಿ20 ಟೂರ್ನಿ ಕೂಡ ಆರಂಭವಾಗಲಿದೆ. ಈ ಏಷ್ಯನ್ ಗೇಮ್ಸ್ ಮುಗಿದ ತಕ್ಷಣವೇ ವೆಸ್ಟ್ ಇಂಡೀಸ್ ಎದುರಿನ 5 ಪಂದ್ಯಗಳ ಹೈ-ವೋಲ್ಟೇಜ್ ಟಿ20 ಸರಣಿ ಧಮಾಕಾ ಶುರುವಾಗಲಿದೆ.

ಭಾರತ vs ವೆಸ್ಟ್ ಇಂಡೀಸ್ ಸರಣಿ ವೇಳಾಪಟ್ಟಿ:

ಸೆಪ್ಟೆಂಬರ್ 27: 1ನೇ ಏಕದಿನ ಪಂದ್ಯ (ತಿರುವನಂತಪುರಂ)

ಸೆಪ್ಟೆಂಬರ್ 30: 2ನೇ ಏಕದಿನ ಪಂದ್ಯ (ಗುವಾಹಾಟಿ)

ಅಕ್ಟೋಬರ್ 03: 3ನೇ ಏಕದಿನ ಪಂದ್ಯ (ಚಂಡೀಗಢ)

ಅಕ್ಟೋಬರ್ 06: 1ನೇ ಟಿ20 ಪಂದ್ಯ (ಲಕ್ನೋ)

ಅಕ್ಟೋಬರ್ 09: 2ನೇ ಟಿ20 ಪಂದ್ಯ (ರಾಂಚಿ)

ಅಕ್ಟೋಬರ್ 11: 3ನೇ ಟಿ20 ಪಂದ್ಯ (ಇಂದೋರ್)

ಅಕ್ಟೋಬರ್ 14: 4ನೇ ಟಿ20 ಪಂದ್ಯ (ಹೈದರಾಬಾದ್)

ಅಕ್ಟೋಬರ್ 17: 5ನೇ ಟಿ20 ಪಂದ್ಯ (ಬೆಂಗಳೂರು)

ಒಟ್ಟಿನಲ್ಲಿ ಈ ತಿಂಗಳು ಕ್ರಿಕೆಟ್ ಅಭಿಮಾನಿಗಳಿಗೆ ಒಂದಾದ ಮೇಲೊಂದರಂತೆ ದಿನವೂ ಮ್ಯಾಚ್ ಹಬ್ಬವೇ ಕಾದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !