September 20, 2026
Sunday, September 20, 2026
spot_img

Food | ಬಿಸಿ ಬಿಸಿ ಅನ್ನ, ರೊಟ್ಟಿ, ಚಪಾತಿಗಂತೂ ಸೂಪರ್ ಕಾಂಬಿನೇಷನ್.. ಈ ಬದನೆಕಾಯಿ ಪಲ್ಯ!

ಬದನೆಕಾಯಿ

ಈರುಳ್ಳಿ

ಟೊಮೆಟೊ

ಹಸಿಮೆಣಸಿನಕಾಯಿ

ಖಾರದ ಪುಡಿ

ಧನಿಯಾ ಪುಡಿ

ಅರಿಶಿನ ಪುಡಿ

ಸಾಾಸಿವೆ, ಜೀರಿಗೆ

ಕರಿಬೇವು, ಕೊತ್ತಂಬರಿ ಸೊಪ್ಪು

ಹುಣಸೆಹಣ್ಣಿನ ರಸ

ಎಣ್ಣೆ ಹಾಗೂ ಉಪ್ಪು

ಮೊದಲು ಬದನೆಕಾಯಿಯನ್ನ ಹೆಚ್ಚಿ ತಕ್ಷಣ ಉಪ್ಪು ನೀರಿಗೆ ಹಾಕಿ ಇಡಿ. ಬಾಣಲೆಗೆ ೩-೪ ಚಮಚ ಎಣ್ಣೆ ಹಾಕಿ, ಎಣ್ಣೆ ಕಾಯ್ದ ಮೇಲೆ ಸಾಸಿವೆ, ಜೀರಿಗೆ, ಕರಿಬೇವು, ಹಸಿಮೆಣಸಿನಕಾಯಿ ಹಾಕಿ ಚಟಪಟ ಅನ್ನಿಸಿ. ನಂತ್ರ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಕೆಂಪಾಗೋವರೆಗೆ ಹುರಿಯಿರಿ. ಆಮೇಲೆ ಟೊಮೆಟೊ ಹಾಕಿ ಮೆತ್ತಗಾಗೋವರೆಗೆ ಬೇಯಿಸಿ. ಈಗ ಖಾರದ ಪುಡಿ, ಧನಿಯಾ ಪುಡಿ, ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಮಸಾಲೆ ಹಸಿ ವಾಸನೆ ಹೋಗೋವರೆಗೆ ಕೈಯಾಡಿಸಿ. ನೀರಲ್ಲಿದ್ದ ಬದನೆಕಾಯಿ ಚೂರುಗಳನ್ನು ತೆಗೆದು ಮಸಾಲೆಗೆ ಹಾಕಿ ಚೆನ್ನಾಗಿ ಕಲಸಿ. ಹುಣಸೆಹಣ್ಣಿನ ರಸ ಹಾಕಿ, ಸ್ವಲ್ಪ ನೀರು ಚಿಮುಕಿಸಿ ತಟ್ಟೆ ಮುಚ್ಚಿ ೮-೧೦ ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಿ.

ಬದನೆಕಾಯಿ ಮೆತ್ತಗಾಗಿ ಎಣ್ಣೆ ಬಿಡಲು ಶುರುವಾದಾಗ, ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದ್ರೆ ಘಮಘಮಿಸುವ ಬದನೆಕಾಯಿ ಪಲ್ಯ ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !