September 22, 2026
Tuesday, September 22, 2026
spot_img

ಕಿವೀಸ್ ಪ್ರವಾಸದಲ್ಲಿ ‘ಶೆಡ್ಯೂಲ್’ ಯಡವಟ್ಟು: ಕೊನೆ 2 ಏಕದಿನ ಪಂದ್ಯಕ್ಕೆ ಸ್ಟಾರ್ ಆಟಗಾರರು ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾ ಅಕ್ಟೋಬರ್ 22 ರಿಂದ ನ್ಯೂಝಿಲೆಂಡ್ ವಿರುದ್ಧ ಸುದೀರ್ಘ ಪ್ರವಾಸ ಕೈಗೊಳ್ಳುತ್ತಿರೋದು ಗೊತ್ತೇ ಇದೆ. 5 ಟಿ20, 5 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನ ಆಡೋಕೆ ಬಾಯ್ಸ್ ಫುಲ್ ರೆಡಿಯಾಗಿದ್ದಾರೆ. ಆದರೆ, ಕ್ರಿಕೆಟ್ ಪ್ರೇಮಿಗಳಿಗೆ ಮತ್ತೆ ಆಟಗಾರರಿಗೆ ದೊಡ್ಡ ತಲೆನೋವು ಶುರುವಾಗಿದ್ದು ಬಿಸಿಸಿಐ ಕೊಟ್ಟಿರೋ ವೇಳಾಪಟ್ಟಿಯಿಂದ. ಸರಣಿಯ ಕೊನೆಯ ಎರಡು ಏಕದಿನ ಪಂದ್ಯಗಳಿಗೆ ಟೀಮ್ ಇಂಡಿಯಾದ ಅರ್ಧಕ್ಕರ್ಧ ಮೇನ್ ಪ್ಲೇಯರ್ಸ್ ಅಲಭ್ಯರಾಗೋದು ಬಹುತೇಕ ಗ್ಯಾರಂಟಿ ಆಗಿದೆ.

ಏನಿದು ಶೆಡ್ಯೂಲ್ ರಾದ್ಧಾಂತ?

ಭಾರತ ಮತ್ತು ನ್ಯೂಝಿಲೆಂಡ್ ನಡುವಿನ 5 ಪಂದ್ಯಗಳ ಏಕದಿನ ಸರಣಿ ನವೆಂಬರ್ 15 ಕ್ಕೆ ಮುಗಿಯುತ್ತೆ. ಆದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿರೋ ಮೊದಲ ಟೆಸ್ಟ್ ಪಂದ್ಯ ನವೆಂಬರ್ 19 ಕ್ಕೆ ವೆಲ್ಲಿಂಗ್ಟನ್‌ನಲ್ಲಿ ಸ್ಟಾರ್ಟ್ ಆಗುತ್ತೆ. ಅಂದರೆ, ಒಡಿಐ ಸರಣಿ ಮುಗಿದು ಕೇವಲ 4 ದಿನಗಳಲ್ಲೇ ಟೆಸ್ಟ್ ಪಂದ್ಯ ಆಡಬೇಕಾಗಿದೆ. ವೈಟ್ ಬಾಲ್ ಕ್ರಿಕೆಟ್‌ನಿಂದ ರೆಡ್ ಬಾಲ್ ಕ್ರಿಕೆಟ್‌ಗೆ ಸಡನ್ ಆಗಿ ಶಿಫ್ಟ್ ಆಗಿ, ಅಲ್ಲಿದ್ದ ವೆದರ್ ಹಾಗೂ ಪಿಚ್ ಕಂಡೀಷನ್‌ಗೆ ಹೊಂದಿಕೊಳ್ಳೋದು ಅಷ್ಟೊಂದು ಈಸಿಯಲ್ಲ. ಆಟಗಾರರಿಗೆ ಕನಿಷ್ಠ ಪ್ರಾಕ್ಟೀಸ್ ಮಾಡೋಕೂ ಟೈಮ್ ಸಿಗಲ್ಲ ಅನ್ನೋದೇ ದೊಡ್ಡ ಪ್ರಾಬ್ಲಮ್.

ಈ ಗೊಂದಲಕ್ಕೆ ಮ್ಯಾನೇಜ್‌ಮೆಂಟ್ ಒಂದು ಸಲ್ಯೂಷನ್ ಹುಡುಕಿದೆ. ಟೆಸ್ಟ್ ಸರಣಿಗೆ ಫುಲ್ ಪ್ರಿಪೇರ್ ಆಗಲಿ ಎಂದು ಏಕದಿನ ನಾಯಕ ಶುಭ್‌ಮನ್ ಗಿಲ್ ಸೇರಿದಂತೆ ಪ್ರಮುಖ ಮಲ್ಟಿ-ಫಾರ್ಮ್ಯಾಟ್ ಆಟಗಾರರನ್ನ ಕೊನೆಯ ಎರಡು ಏಕದಿನ ಪಂದ್ಯಗಳಿಂದ ರಿಲೀವ್ ಮಾಡೋಕೆ ಪ್ಲಾನ್ ಮಾಡಲಾಗಿದೆ. ಅವರು ಕೊನೆ ಏಕದಿನ ಆಡದೇ ನೇರವಾಗಿ ವೆಲ್ಲಿಂಗ್ಟನ್‌ಗೆ ಹೋಗಿ ಟೆಸ್ಟ್ ಪ್ರಾಕ್ಟೀಸ್ ಕ್ಯಾಂಪ್ ಜಾಯಿನ್ ಆಗ್ತಾರಂತೆ.

ಕೋಚ್‌ಗಳಿಗೂ ತಲೆನೋವು

ಬರಿ ಆಟಗಾರರು ಅಷ್ಟೇ ಅಲ್ಲ, ಹೆಡ್ ಕೋಚ್ ಗೌತಮ್ ಗಂಭೀರ್, ಮೋರ್ನೆ ಮೋರ್ಕೆಲ್, ಸಿತಾಂಶು ಕೋಟಕ್ ಮತ್ತು ಸುಭದೀಪ್ ಘೋಷ್ ಅವರನ್ನೊಳಗೊಂಡ ಕೋಚಿಂಗ್ ಸಿಬ್ಬಂದಿಯೂ ಡಿವೈಡ್ ಆಗಲಿದೆ. ಇಬ್ಬರು ಕೋಚ್‌ಗಳು ಏಕದಿನ ಟೀಮ್ ಜೊತೆ ಇರ್ತಾರೆ, ಇನ್ನುಳಿದ ಇಬ್ಬರು ಕೋಚ್‌ಗಳು ಗಿಲ್-ಬುಮ್ರಾ ಪಡೆ ಜೊತೆ ವೆಲ್ಲಿಂಗ್ಟನ್‌ಗೆ ಹೋಗಿ ರೆಡ್ ಬಾಲ್ ಕ್ಯಾಂಪ್ ನೋಡ್ಕೊಳ್ತಾರೆ.

ಒಟ್ಟಿನಲ್ಲಿ ಬಿಸಿಸಿಐ ಮಾಡಿದ ಈ ಗಡಿಬಿಡಿ ವೇಳಾಪಟ್ಟಿಯಿಂದಾಗಿ ಭಾರತೀಯ ಕ್ರಿಕೆಟ್ ತಂಡ ಒಂದೇ ಪ್ರವಾಸದಲ್ಲಿ ಎರಡು ಬೇರೆ ಬೇರೆ ಟೀಮ್‌ನಂತೆ ಕೆಲಸ ಮಾಡೋ ಅನಿವಾರ್ಯತೆಗೆ ಸಿಲುಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !