September 21, 2026
Monday, September 21, 2026
spot_img

ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಶೂಟರ್ಸ್‌ಗಳ ಸೌಂಡ್: ಒಂದೇ ಮ್ಯಾಚ್‌ನಲ್ಲಿ ಬೆಳ್ಳಿ-ಕಂಚು ಎರಡೂ ನಮ್ಮದೇ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಶೂಟಿಂಗ್ ಪಟುಗಳು ಮತ್ತೆ ಕಮಾಲ್ ಮಾಡಿದ್ದಾರೆ. ಸೋಮವಾರ ನಡೆದ ಪುರುಷರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಭಾರತದ ಯುವ ಶೂಟರ್‌ಗಳಾದ ಹಿಮಾಂಶು ಧಿಲ್ಲೋನ್ ಮತ್ತು ರುದ್ರಾಂಕ್ಷ್ ಪಾಟೀಲ್ ಅದ್ಭುತ ಸಾಧನೆ ಮಾಡಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಚೀನಾದ ಆಟಗಾರ ಶೇಂಗ್ ಲೀಹಾವೋ ಕೊನೆಕ್ಷಣದಲ್ಲಿ ಸಣ್ಣ ಅಂತರದಲ್ಲಿ ಮುನ್ನಡೆ ಸಾಧಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.

ಫೈನಲ್ ಪಂದ್ಯ ಶುರುವಾಗುತ್ತಿದ್ದಂತೆಯೇ ರುದ್ರಾಂಕ್ಷ್ ಪಾಟೀಲ್ ಫುಲ್ ಫಾರ್ಮ್‌ನಲ್ಲಿದ್ದರು. ಮೊದಲ ಸೀರೀಸ್‌ನಲ್ಲೇ 52.8 ಪಾಯಿಂಟ್ಸ್ ಬಾರಿಸಿ ಲೀಡ್ ತಗೊಂಡ್ರು. ಆಮೇಲೆ ಸೆಕೆಂಡ್ ಸೀರೀಸ್‌ನಲ್ಲಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 53.2 ಸ್ಕೋರ್ ಮಾಡಿ, ಬೋರ್ಡ್‌ನಲ್ಲಿ 1.1 ಪಾಯಿಂಟ್‌ಗಳ ಭಾರಿ ಮುನ್ನಡೆ ಸಾಧಿಸಿದರು.

ಇತ್ತ ಹಿಮಾಂಶು ಕೂಡ ಯಾವುದರಲ್ಲೂ ಕಮ್ಮಿ ಇರಲಿಲ್ಲ. ಗೇಮ್ ಕಾವೇರುತ್ತಾ ಹೋದಂತೆ ಹಿಮಾಂಶು ಸದ್ದಿಲ್ಲದೇ ಸೆಕೆಂಡ್ ಪ್ಲೇಸ್‌ಗೆ ಜಂಪ್ ಆದ್ರು. ಮೊದಲ 12 ಶಾಟ್‌ಗಳು ಮುಗಿಯುವಷ್ಟರಲ್ಲಿ 127.4 ಪಾಯಿಂಟ್‌ಗಳೊಂದಿಗೆ ರುದ್ರಾಂಕ್ಷ್ ನಂ.1 ಪ್ಲೇಸ್‌ನಲ್ಲಿದ್ದರೆ, 126.6 ಪಾಯಿಂಟ್ಸ್ ತಗೊಂಡು ಹಿಮಾಂಶು ನಂ.2 ನಲ್ಲಿದ್ದರು. ಚೀನಾದ ಶೂಟರ್ 126.3 ಪಾಯಿಂಟ್ಸ್‌ನೊಂದಿಗೆ ಮೂರನೇ ಸ್ಥಾನದಲ್ಲಿದ್ದರು.

ಪಂದ್ಯದ ಮಧ್ಯದ ಹಂತದಲ್ಲಿ ಗೇಮ್ ಫುಲ್ ರೋಚಕ ತಿರುವು ಪಡೀತು. 16 ಶಾಟ್‌ಗಳು ಮುಗಿಯುವ ಹೊತ್ತಿಗೆ ಚೀನಾದ ಶೆಂಗ್ ಲಿಹಾವೋ 168.8 ಪಾಯಿಂಟ್ಸ್ ಮಾಡಿ ನಂ.1 ಗೆ ಬಂದರು. ಆದರೆ ನಮ್ಮ ರುದ್ರಾಂಕ್ಷ್ ಮತ್ತು ಹಿಮಾಂಶು ಇಬ್ಬರೂ 168.6 ಪಾಯಿಂಟ್ಸ್‌ನೊಂದಿಗೆ ಸಮಬಲ ಕಾಯ್ದುಕೊಂಡರು.

ಒಟ್ಟಿನಲ್ಲಿ ಪುರುಷರ 10 ಮೀಟರ್ ಏರ್ ರೈಫಲ್‌ನಲ್ಲಿ ಭಾರತದ ಇಬ್ಬರು ಶೂಟರ್‌ಗಳು ಒಂದೇ ಬಾರಿಗೆ ಪೋಡಿಯಂ ಏರಿ ಭಾರತದ ತ್ರಿವರ್ಣ ಧ್ವಜವನ್ನು ಎತ್ತರದಲ್ಲಿ ಹಾರುವಂತೆ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !