September 22, 2026
Tuesday, September 22, 2026
spot_img

ಲಿಫ್ಟ್, ಗೋಡೆ ಮಧ್ಯೆ ಸಿಲುಕಿದ ವ್ಯಕ್ತಿಯ ಕಾಲು: 90 ನಿಮಿಷಗಳ ಹೋರಾಟದ ನಂತರ ಆಗಿದ್ದೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನ ಮೂಸಾ ಪೇಟ್‌ನಲ್ಲಿ ಎದೆ ನಡುಗಿಸೋ ಘಟನೆಯೊಂದು ನಡೆದಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ. ಕಟ್ಟಡದ ಲಿಫ್ಟ್ ಮತ್ತು ಗೋಡೆ ನಡುವೆ ಸಿಕ್ಕಿಬಿದ್ದು ಸಾವಿನ ದವಡೆಯಲ್ಲಿದ್ದ ವ್ಯಕ್ತಿಯೊಬ್ಬರನ್ನು ಹೈದರಾಬಾದ್‌ನ ಹೈಡ್ರಾ ತಂಡ ಯಶಸ್ವಿಯಾಗಿ ರಕ್ಷಿಸಿದೆ.

ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಮೂಸಾ ಪೇಟ್‌ನ ಮೂರು ಅಂತಸ್ತಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಮುರಳಿ (40) ಅನ್ನೋ ವ್ಯಕ್ತಿ ತಮ್ಮ ಹೆಂಡತಿಯ ಜೊತೆ ಗ್ರೌಂಡ್ ಫ್ಲೋರ್‌ನಿಂದ ಎರಡನೇ ಫ್ಲೋರ್‌ಗೆ ಹೋಗೋಕೆ ಲಿಫ್ಟ್ ಹತ್ತಿದ್ದಾರೆ. ಎರಡನೇ ಫ್ಲೋರ್ ತಲುಪುತ್ತಿದ್ದಂತೆಯೇ ಮುರಳಿ ಅವರು ಲಿಫ್ಟ್‌ನಿಂದ ಹೊರಗೆ ಕಾಲಿಡಲು ಮುಂದಾಗಿದ್ದಾರೆ. ಆದರೆ, ಅದೇ ಸಮಯಕ್ಕೆ ಸರಿಯಾಗಿ ಮೂರನೇ ಫ್ಲೋರ್‌ನಿಂದ ಯಾರೋ ಲಿಫ್ಟ್ ಬಟನ್ ಪ್ರೆಸ್ ಮಾಡಿದ್ದಾರೆ.

ಅಷ್ಟಕ್ಕೇ ಲಿಫ್ಟ್‌ನ ಸೆನ್ಸಾರ್ ಪ್ರಾಬ್ಲಮ್‌ನಿಂದಾಗಿ ಡೋರ್ ಮುಚ್ಚುವ ಮುನ್ನವೇ ಲಿಫ್ಟ್ ಮೇಲಕ್ಕೆ ಚಲಿಸಲು ಶುರುವಾಗಿದೆ. ಈ ವೇಳೆ ಮುರಳಿ ಅವರ ಒಂದು ಕಾಲು ಲಿಫ್ಟ್ ಒಳಗಿದ್ದರೆ, ಇನ್ನೊಂದು ಕಾಲು ಹೊರಗಿತ್ತು. ಲಿಫ್ಟ್‌ನ ಹಳೆಯ ಗ್ರಿಲ್ ನಡುವೆ ಅವರ ಕಾಲು ಸಿಲುಕಿಕೊಂಡು, ಅವರು ಎರಡನೇ ಮತ್ತು ಮೂರನೇ ಫ್ಲೋರ್ ಮಧ್ಯೆ ತಲೆಕೆಳಗಾಗಿ ನೇತಾಡುವಂತಾಗಿದೆ. ಲಿಫ್ಟ್ ಒಳಗಿದ್ದ ಹೆಂಡತಿ ಗಂಟಲು ಹರಿಯುವಂತೆ ಕೂಗಾಡಿದ್ದನ್ನು ಕೇಳಿ ಅಪಾರ್ಟ್‌ಮೆಂಟ್‌ನ ಜನ ಓಡಿಬಂದು ಕಾಪಾಡೋಕೆ ಟ್ರೈ ಮಾಡಿದ್ದಾರೆ. ಆದರೆ ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗದೇ ಇದ್ದಾಗ ತಕ್ಷಣ ಹೈಡ್ರಾ ಕಂಟ್ರೋಲ್ ರೂಮ್‌ಗೆ ಕಾಲ್ ಮಾಡಿದ್ದಾರೆ.

ಕೂಡಲೇ ಅಲರ್ಟ್ ಆದ ಹೈಡ್ರಾದ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ ತಂಡ ಘಟನಾ ಸ್ಥಳಕ್ಕೆ ಧಾವಿಸಿದೆ. ಲಿಫ್ಟ್ ಮತ್ತು ಗೋಡೆಯ ಮಧ್ಯೆ ಜೀವ ಹಿಡಿದುಕೊಂಡು ನೇತಾಡುತ್ತಿದ್ದ ಮುರಳಿಯವರನ್ನು ಹೊರಗೆ ತೆಗೆಯುವುದು ಅಷ್ಟು ಸುಲಭವಾಗಿರಲಿಲ್ಲ. ಹೈಡ್ರಾ ಸಿಬ್ಬಂದಿ ಗೋಡೆಯ ಒಂದು ಭಾಗವನ್ನು ಒಡೆದು ಒಳಗಿಳಿದಿದ್ದಾರೆ. ಜೊತೆಗೆ ಸನಾತ್ ನಗರ್ ಫೈರ್ ಸಿಬ್ಬಂದಿ ಕೂಡ ಸ್ಪಾಟ್‌ಗೆ ಬಂದು ಹೈಡ್ರಾಲಿಕ್ ಕಟ್ಟರ್ ಬಳಸಿ ಲಿಫ್ಟ್ ಗ್ರಿಲ್ ಕಟ್ ಮಾಡಿದ್ದಾರೆ.

90 ನಿಮಿಷಗಳ ಕಠಿಣ ಕಾರ್ಯಾಚರಣೆ

ಸುಮಾರು 90 ನಿಮಿಷಗಳ ಕಾಲ ನಡೆದ ಈ ಕಾರ್ಯಾಚರಣೆಯ ನಂತರ ಬೆಳಿಗ್ಗೆ 10:50ಕ್ಕೆ ಮುರಳಿಯವರನ್ನು ಪ್ರಾಣಾಪಾಯದಿಂದ ಪಾರು ಮಾಡಿ ಹೊರಗೆ ತರಲಾಗಿದೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಲಿಫ್ಟ್ ಮತ್ತು ಗೋಡೆಯ ಮಧ್ಯೆ ಸಿಲುಕಿದ್ದರಿಂದ ಅವರ ಕಾಲಿನ ಮೂಳೆ ಮುರಿದಿದೆ. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಈ ಘಟನೆ ಈಗ ಎಲ್ಲೆಡೆ ವೈರಲ್ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !