ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಹಲ್ಲುಜ್ಜುವುದು, ನಾಲಿಗೆಯನ್ನು ಸ್ವಚ್ಛಗೊಳಿಸುವುದು ಮತ್ತು ಬಾಯಿಯ ನೈರ್ಮಲ್ಯ ಕಾಪಾಡುವುದು ಅತ್ಯಂತ ಮುಖ್ಯ. ಇತ್ತೀಚಿನ ದಿನಗಳಲ್ಲಿ ಇವುಗಳ ಜೊತೆಗೆ ‘ಆಯಿಲ್ ಪುಲ್ಲಿಂಗ್’ ಕೂಡ ಸಾಕಷ್ಟು ಜನಪ್ರಿಯವಾಗುತ್ತಿದೆ. ಇದು ಆಯುರ್ವೇದದಲ್ಲಿ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ಸಾಂಪ್ರದಾಯಿಕ ವಿಧಾನವಾಗಿದೆ. ಹಾಗಾದರೆ ಆಯಿಲ್ ಪುಲ್ಲಿಂಗ್ ಎಂದರೇನು? ಇದು ಹಲ್ಲು ಮತ್ತು ಒಸಡುಗಳ ಆರೋಗ್ಯಕ್ಕೆ ನಿಜವಾಗಿಯೂ ಪ್ರಯೋಜನಕಾರಿಯೇ? ತಿಳಿಯೋಣ.
ಆಯಿಲ್ ಪುಲ್ಲಿಂಗ್ ಎಂದರೇನು?
ಆಯಿಲ್ ಪುಲ್ಲಿಂಗ್ ಎಂದರೆ ಬಾಯಿಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು ಸುಮಾರು 5ರಿಂದ 10 ನಿಮಿಷಗಳ ಕಾಲ ಬಾಯಿಯೊಳಗೆ ಎಲ್ಲಾ ಕಡೆ ನಿಧಾನವಾಗಿ ಹರಿದಾಡಿ ನಂತರ ಆ ಎಣ್ಣೆಯನ್ನು ಉಗುಳಬೇಕು.
ಆಯಿಲ್ ಪುಲ್ಲಿಂಗ್ನ ಆರೋಗ್ಯ ಪ್ರಯೋಜನಗಳು
- ಬಾಯಿಯ ದುರ್ವಾಸನೆ ಕಡಿಮೆ ಮಾಡಲು ಸಹಕಾರಿ
- ಒಸಡುಗಳ ಆರೋಗ್ಯಕ್ಕೆ ಸಹಕಾರಿ
- ಬಾಯಿಯ ಸ್ವಚ್ಛತೆ ಕಾಪಾಡಲು ಸಹಕಾರಿ
ಆಯಿಲ್ ಪುಲ್ಲಿಂಗ್ಗೆ ಯಾವ ಎಣ್ಣೆ ಉತ್ತಮ?
- ತೆಂಗಿನೆಣ್ಣೆಯಲ್ಲಿ ಲಾರಿಕ್ ಆಮ್ಲವಿದ್ದು, ಇದು ಕೆಲವು ಬ್ಯಾಕ್ಟೀರಿಯಾಗಳ ವಿರುದ್ಧ ಕಾರ್ಯನಿರ್ವಹಿಸುವ ಗುಣ ಹೊಂದಿದೆ. ಆಯಿಲ್ ಪುಲ್ಲಿಂಗ್ಗೆ ಸಾಮಾನ್ಯವಾಗಿ ಬಳಸುವ ಎಣ್ಣೆಗಳಲ್ಲಿ ಇದೂ ಒಂದು.
- ಆಯುರ್ವೇದದ ಸಾಂಪ್ರದಾಯಿಕ ವಿಧಾನಗಳಲ್ಲಿ ಎಳ್ಳೆಣ್ಣೆಯನ್ನು ಬಳಸಲಾಗುತ್ತದೆ. ಇದು ಆಯಿಲ್ ಪುಲ್ಲಿಂಗ್ಗೆ ಮತ್ತೊಂದು ಜನಪ್ರಿಯ ಆಯ್ಕೆಯಾಗಿದೆ.
- ಸೂರ್ಯಕಾಂತಿ ಎಣ್ಣೆ: ಕೆಲವು ಸಾಂಪ್ರದಾಯಿಕ ಆಯಿಲ್ ಪುಲ್ಲಿಂಗ್ ವಿಧಾನಗಳಲ್ಲಿ ಸೂರ್ಯಕಾಂತಿ ಎಣ್ಣೆಯನ್ನೂ ಬಳಸಲಾಗುತ್ತದೆ.
ಆಯಿಲ್ ಪುಲ್ಲಿಂಗ್ ಮಾಡುವುದು ಹೇಗೆ?
- ಒಂದು ಟೇಬಲ್ ಸ್ಪೂನ್ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದ ಎಣ್ಣೆಯನ್ನು ತೆಗೆದುಕೊಳ್ಳಿ.
- ಎಣ್ಣೆಯನ್ನು ಬಾಯಿಗೆ ಹಾಕಿಕೊಳ್ಳಿ.
- ಸುಮಾರು 5ರಿಂದ 10 ನಿಮಿಷಗಳ ಕಾಲ ನಿಧಾನವಾಗಿ ಬಾಯಿಯೊಳಗೆ ಹರಿದಾಡಿಸಿ. ನಂತರ ಎಣ್ಣೆಯನ್ನು ಉಗುಳಿ.
- ಶುದ್ಧ ನೀರಿನಿಂದ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಿ.
- ನಂತರ ಎಂದಿನಂತೆ ಫ್ಲೋರೈಡ್ ಟೂತ್ಪೇಸ್ಟ್ ಬಳಸಿ ಹಲ್ಲುಜ್ಜಿಕೊಳ್ಳಿ.



