September 21, 2026
Monday, September 21, 2026
spot_img

ಕಾಸರಗೋಡಿನ 14 ಮಂದಿ ಕೃಷಿ ಸಾಧಕರ ಮುಡಿಗೆ ಕರ್ನಾಟಕ ಸಾವಯವ ಕೃಷಿಕ ಪ್ರಶಸ್ತಿಯ ಗರಿ

ಹೊಸದಿಗಂತ ವರದಿ ಬದಿಯಡ್ಕ:

ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಸೋಮವಾರ ಕರ್ನಾಟಕ ಸಾವಯವ ಕೃಷಿ ಯೋಜನೆಯ ಮಂಗಳ ಕಿಸಾನ್ ಸಮೃದ್ಧಿ ವಿಭಾಗದ 2026ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಒಳಗೊಂಡ ಮಂಗಳೂರು ವಿಭಾಗದ 150 ಕೃಷಿಕರಿಗೆ ನೀಡುವ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕಾಸರಗೋಡು ವಿಭಾಗದ ಕೃಷಿಕರಾದ ಈಶ್ವರ ರಾವ್, ಮಹಾಬಲೇಶ್ವರ ಭಟ್, ರವೀಂದ್ರ ರೈ, ಶ್ಯಾಮ ಭಟ್ ಕೆ. ಗದ್ದೆಮನೆ, ಹರೀಶ ಹಳೆಮನೆ, ಪ್ರಕಾಶ್ ರೈ, ಪ್ರದೀಪ್ ಭಟ್, ವಿಷ್ಣುಮೋಹನ, ದಾಮೋದರ ನಾಯಕ್, ರವೀಂದ್ರ ನಾಯಕ್, ಶಂಕರನಾರಾಯಣ ಭಟ್, ತಾರಾನಾಥ ಶೆಟ್ಟಿ, ರವೀಂದ್ರ ಶೆಟ್ಟಿ ಇವರನ್ನು ವೇದಿಕೆಯಲ್ಲಿ ಶಾಲು ಹೊದೆಸಿ, ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಮಾಣಿಲ ಶ್ರೀಧಾಮದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಸ್ವಾಮೀಜಿ ದೀಪ ಬೆಳಗಿಸಿ ಕಾರ್ಯಕ್ರಮನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕೃಷಿಕರನ್ನು ಗೌರವಿಸುವುದು ಬಲುದೊಡ್ಡ ಕಾರ್ಯ, ಸಾವಯವ ಗೊಬ್ಬರದ ಮೂಲಕ ಮಣ್ಣಿನ ಫಲವತ್ತತೆ ಮತ್ತು ಆರೋಗ್ಯವನ್ನು ರಕ್ಷಿಸಲು ಸಾಧ್ಯ. ಪ್ರಸ್ತುತ ದಿನಗಳಲ್ಲಿ ಸಾವಯವ ಕೃಷಿ ಪದ್ಧತಿ ಪ್ರತಿಯೊಬ್ಬರಿಗೂ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಆಡಳಿತ ನಿರ್ದೇಶಕ ಮೋಹನ್ ಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಸಾಮಾಜಿಕ ಮುಖಂಡರು, ನಾಡಿನ ಪ್ರಮುಖರು, 2025ನೇ ಸಾಲಿನ ಕೃಷಿಪ್ರಶಸ್ತಿ ವಿಜೇತರು ಪಾಲ್ಗೊಂಡಿದ್ದರು. ಕಾಸರಗೋಡಿನ ಅಧಿಕಾರಿಗಳಾದ ಪೂರ್ಣಿಮಾ ಅಡೂರು, ಕವಿತಾ ರಾವ್ ಬದಿಯಡ್ಕ, ಧನ್ಯಶ್ರೀ ಭಟ್ ಸರಳಿ ನೀರ್ಚಾಲು, ಹೇಮಾವತಿ ರೈ ಮುಳ್ಳೇರಿಯ, ಉಷಾ ರೈ ಬಂದಡ್ಕ, ಶ್ರೀಲತಾ ಚಿಗುರುಪಾದೆ ಸಹಕರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !