ಬೆಳಗ್ಗೆ ಎದ್ದು ತಿಂಡಿ ಮಾಡುವ ಟೆನ್ಶನ್ ಎಲ್ಲರಿಗೂ ಇದ್ದೇ ಇರುತ್ತದೆ. ಮಕ್ಕಳಿಗೂ ಇಷ್ಟ ಆಗಬೇಕು, ಮನೆಯವರು ಬಾಯಿ ಚಪ್ಪರಿಸಿಕೊಂಡು ತಿನ್ನಬೇಕು, ಆರೋಗ್ಯ ಕೂಡ ಇಂಪ್ರೂವ್ ಆಗಬೇಕು ಎನ್ನುವುದನ್ನು ತಲೆಯಲ್ಲಿ ಇಟ್ಟುಕೊಂಡು ಒಳ್ಳೆಯ ರೆಸಿಪಿ ರೆಡಿ ಮಾಡಬೇಕು ಅಂದರೆ ಈ ಸಿಹಿ ಗೆಣಸಿನ ಸ್ಯಾಂಡ್‌ವಿಚ್ ಟ್ರೈ ಮಾಡಿ.
ಏನೆಲ್ಲಾ ಬೇಕು?
1 ಸಿಹಿ ಗೆಣಸು, 4 ಬ್ರೆಡ್, 1 ಸಣ್ಣ ಈರುಳ್ಳಿ, 1–2 ಹಸಿಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಚಿಟಿಕೆ ಜೀರಿಗೆ ಪುಡಿ, ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಟೋಸ್ಟ್ ಮಾಡಲು ಸ್ವಲ್ಪ ತುಪ್ಪ ಅಥವಾ ಬೆಣ್ಣೆ.
ಮಾಡುವ ವಿಧಾನ
ಮೊದಲು ಸಿಹಿ ಗೆಣಸನ್ನು ಚೆನ್ನಾಗಿ ಬೇಯಿಸಿ ಸಿಪ್ಪೆ ತೆಗೆದು ಮೃದುವಾಗಿ ಮ್ಯಾಶ್ ಮಾಡಿಕೊಳ್ಳಿ. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ಅರಿಶಿನ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಮಿಶ್ರಣ ಡ್ರೈ ಆಗಿದ್ದರೆ ಮಾತ್ರ ಸ್ವಲ್ಪ ನೀರು ಅಥವಾ ನಿಂಬೆ ರಸ ಸೇರಿಸಬಹುದು.
ಬ್ರೆಡ್ ತುಂಡಿನ ಮೇಲೆ ಸಿಹಿ ಗೆಣಸಿನ ಮಿಶ್ರಣವನ್ನು ಸಮವಾಗಿ ಹರಡಿ. ಮತ್ತೊಂದು ಬ್ರೆಡ್ ತುಂಡಿನಿಂದ ಮುಚ್ಚಿ. ಬಿಸಿ ತವಾದ ಮೇಲೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆ ಸವರಿ ಸ್ಯಾಂಡ್‌ವಿಚ್ ಇಟ್ಟು ಎರಡೂ ಬದಿಗಳನ್ನು ಗೋಲ್ಡನ್ ಬಣ್ಣ ಬರುವವರೆಗೆ ಟೋಸ್ಟ್ ಮಾಡಿ.



