ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ತಾಯ್ ವಾಮನ್ ತಂಗ ಮೋದಿರಂ ಯೋಜನೆಗೆ ಅಧಿಕೃತ ಚಾಲನೆ ನೀಡಿದ್ದಾರೆ. ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಒಂದು ಗ್ರಾಮ್ನ ಚಿನ್ನದ ಉಂಗುರ ತೊಡಿಸಿದ್ದಾರೆ.
ಆಸ್ಪತ್ರೆಯ ಹೆರಿಗೆ ವಾರ್ಡ್ಗೆ ಭೇಟಿ ನೀಡಿದ ಅವರು, ನವಜಾತ ಶಿಶುಗಳಿಗೆ ಆಶೀರ್ವದಿಸಿದರು. ಬಳಿಕ ಶಿಶುಗಳ ಪೋಷಕರಿಗೆ ಉಂಗುರಗಳನ್ನು ವಿತರಿಸಿದರು. ಟಿವಿಕೆ ಪಕ್ಷ ಚುನಾವಣೆಗೂ ಮುನ್ನ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಣೆ ಮಾಡಿತ್ತು. ಅಂತೆಯೇ ಪುಟ್ಟ ಮಗುವಿನ ಕೈಗೆ ಉಂಗುರ ತೊಡಿಸಿ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಶಿಶುಗಳಿಗೆ ಸರ್ಕಾರವು ಒಂದು ಗ್ರಾಂ, 22 ಕ್ಯಾರೆಟ್ ಚಿನ್ನದ ಉಂಗುರವನ್ನು ನೀಡುತ್ತದೆ. ಈ ಯೋಜನೆಗೆ ಅರ್ಹತೆ ಪಡೆಯಲು, ನವಜಾತ ಶಿಶುಗಳ ತಾಯಂದಿರು ತಮಿಳುನಾಡಿನ ಖಾಯಂ ನಿವಾಸಿಗಳಾಗಿರಬೇಕು.ಈ ಯೋಜನೆಗಾಗಿ ರಾಜ್ಯ ಸರ್ಕಾರ ವಾರ್ಷಿಕ 755.83 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಈಗಾಗಲೇ 1.28 ಲಕ್ಷ ಉಂಗುರಗಳನ್ನು ಈಗಾಗಲೇ ಸಿದ್ಧಪಡಿಸಿ ಇಡಲಾಗಿದೆ. ಈ ಉಂಗುರಗಳು ವಿಶಿಷ್ಟ ಸರಣಿ ಸಂಖ್ಯೆಗಳನ್ನು ಹೊಂದಿರುತ್ತವೆ. ಟ್ಯಾಂಪರ್-ಪ್ರೂಫ್ ಪ್ಯಾಕೇಜಿಂಗ್ನಲ್ಲಿ ಈ ಉಂಗುರಗಳನ್ನು ವಿತರಿಸಲಾಗುತ್ತದೆ.
ಜೋಯಲುಕಾಸ್ ಹಾಗೂ ಕಲ್ಯಾಣ್ ಜ್ಯುವೆಲರ್ಸ್ನಲ್ಲಿ ಉಂಗುರಗಳು ತಯಾರಾಗುತ್ತವೆ.



