September 29, 2026
Tuesday, September 29, 2026
spot_img

ನಿತ್ಯವೂ ಮಲಗಿದಂತೆ ಕಾರ್‌ನಲ್ಲಿಯೇ ಮಲಗಿದ್ದರೆ ಇಂದು ಗೋವಿಂದನ ಪಾದ ಸೇರಿರುತ್ತಿದ್ದೆ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಬೆಂಗಳೂರಿನ ಮಧ್ಯಭಾಗದಲ್ಲಿರುವ ಮಲ್ಲೇಶ್ವರಂನಲ್ಲಿ ಬೃಹತ್‌ ಗಾತ್ರದ ಮರವೊಂದು ಕಾರಿನ ಮೇಲೆ ಬಿದ್ದಿದ್ದು, ಕಾರು ಸಂಪೂರ್ಣ ಜಖಂ ಆಗಿದೆ.

ಬೆಳಗ್ಗೆ ಕಾರನ್ನು ನೋಡಲು ಬಂದ ಮಾಲೀಕನಿಗೆ ಶಾಕ್‌ ಆಗಿದ್ದು, ನಿತ್ಯವೂ ನಾನು ಕಾರ್‌ನಲ್ಲಿಯೇ ನಿದ್ದೆ ಮಾಡುತ್ತಿದೆ. ಇದೇ ರೀತಿ ನಿನ್ನೆ ಕಾರ್‌ನಲ್ಲಿಯೇ ಮಲಗಿದ್ದರೆ ಇಷ್ಟೊತ್ತಿಗೆ ದೇವರ ಪಾದ ಸೇರಿಬಿಟ್ಟಿರುತ್ತಿದೆ ಎಂದು ಹೇಳಿದ್ದಾರೆ. ರಸ್ತೆ ಬದಿ ನಿಂತಿದ್ದ ಕಾರ್‌ ಮೇಲೆ ಸಂಪೂರ್ಣ ಮರ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಕಾರ್‌ ಮಾಲೀಕ ವಿನೋದ್‌ ಕುಮಾರ್‌ ಮಾತನಾಡಿ, ನಾನು ಯಾವಾಗಲೂ ಕಾರ್‌ನಲ್ಲಿಯೇ ನಿದ್ದೆ ಮಾಡುತ್ತಿದ್ದೆ. ನಿನ್ನೆ ಗೊತ್ತಿರುವವರ ಸಾವಾಗಿತ್ತು. ಹೀಗಾಗಿ ಅಲ್ಲಿಗೆ ಹೋಗಿ ಉಳಿದುಕೊಂಡಿದ್ದೆ. ನಾನು ಕಾರ್‌ನಲ್ಲಿಯೇ ಇದ್ದಿದ್ದರೆ ಖಂಡಿತಾ ಬದುಕಿರುತ್ತಿರಲಿಲ್ಲ. ಇಲ್ಲಿ ರಸ್ತೆ ಅಗೆದಿದ್ದಾರೆ. ಮರದ ಬುಡ ಸಡಿಲ ಆಗಿದೆ. ಹೀಗಾಗಿ ಮಳೆ ಹಾಗೂ ಗಾಳಿಗೆ ಮರ ಬಿದ್ದು ಹೋಗಿದೆ. ಜಿಬಿಎನವರು ಇನ್ನಷ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಮರವನ್ನು ತೆಗೆದು ಕಾರಿನ ರಿಪೇರಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

Must Read