ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಹಿರಿಯ ನಟ ಹಾಗೂ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ‘ಕೌನ್ ಬನೇಗಾ ಕರೋಡ್‌ಪತಿ 18’ ರಿಯಾಲಿಟಿ ಶೋ ಶೂಟಿಂಗ್ ವೇಳೆ ಕಾಲು ಜಾರಿ ಬಿದ್ದು ಅವರ ಮೊಣಕಾಲಿಗೆ ತೀವ್ರ ಗಾಯವಾಗಿದೆ. ಗಾಯದ ಕಾರಣ ತಮಗೆ ನೆಟ್ಟಗೆ ನಿಲ್ಲಲು ಆಗುತ್ತಿಲ್ಲ ಎಂದು ಸ್ವತಃ ಅವರೇ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರೇಕ್ಷಕರ ಎದುರು ಹಂಚಿಕೊಂಡಿದ್ದಾರೆ.
ಇತ್ತೀಚಿನ ಸಂಚಿಕೆಯೊಂದರ ಚಿತ್ರೀಕರಣದ ವೇಳೆ ಈ ದುರಂತ ಸಂಭವಿಸಿದ್ದು, ಅಮಿತಾಭ್ ಅವರು ಪ್ರೇಕ್ಷಕರೊಂದಿಗೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಸೆಟ್‌ನಲ್ಲಿ ಧಡಲ್ ಎಂದು ಬಿದ್ದ ಬಿಗ್ ಬಿ
ತಮ್ಮ ಗಾಯದ ಬಗ್ಗೆ ಪ್ರೇಕ್ಷಕರಿಗೆ ವಿವರಿಸಿದ ಅಮಿತಾಭ್ ಬಚ್ಚನ್, ‘ನನ್ನ ಮೊಣಕಾಲಿಗೆ ಗಾಯವಾಗಿದೆ. ಏನು ಹೇಳಲಿ ಭಾಯ್‌ಸಾಬ್, ನಿನ್ನೆ ಶೂಟಿಂಗ್ ಮಾಡುವಾಗ ನನ್ನ ಕಾಲು ಜಾರಿ ಧಡಲ್ ಎಂದು ಕೆಳಗೆ ಬಿದ್ದೆ’ ಎಂದು ತಮ್ಮ ಮಂಡಿಯತ್ತ ಕೈ ಸನ್ನೆ ಮಾಡುತ್ತಾ ನೋವು ತೋಡಿಕೊಂಡಿದ್ದಾರೆ.
ಕುಳಿತೇ ಶೋ ನಡೆಸಿಕೊಟ್ಟ ನಟ
ಗಾಯದ ತೀವ್ರತೆಯಿಂದಾಗಿ ನಮಗೆ ಹೆಚ್ಚು ಹೊತ್ತು ನಿಲ್ಲಲು ಕಷ್ಟವಾಗುತ್ತಿದ್ದ ಕಾರಣ ನಾನು ನಿಮ್ಮೊಂದಿಗೆ ಕುಳಿತೇ ಮಾತನಾಡುತ್ತೇನೆ ಎಂದು ಪ್ರೇಕ್ಷಕರೊಂದಿಗೆ ತಮ್ಮ ನೋವಿನ ಬಗ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ:
ಅಮಿತಾಭ್ ಬಚ್ಚನ್ ಅವರು ಕೌನ್ ಬನೇಗಾ ಕರೋಡ್‌ಪತಿ ಶೋ ಆರಂಭವಾದ 2000 ನೇ ಇಸವಿಯಿಂದಲೂ ಅದರ ಯಶಸ್ವಿ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. 2007 ರ ಒಂದು ಸೀಸನ್‌ನಲ್ಲಿ ಮಾತ್ರ ಶಾರುಖ್ ಖಾನ್ ಇದರ ನಿರೂಪಣೆ ಮಾಡಿದ್ದರು. ಪ್ರಸ್ತುತ ಅವರು 18 ನೇ ಸೀಸನ್ ಅನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.



