October 1, 2026
Thursday, October 1, 2026
spot_img

Cinema | ಬಾಕ್ಸ್ ಆಫೀಸ್‌ನಲ್ಲಿ ದೃಶ್ಯಂ 3 ಧಮಾಕ: ಮೊದಲ ದಿನವೇ ದಾಖಲೆ ಮಟ್ಟದಲ್ಲಿ ಟಿಕೆಟ್ ಸೇಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಅತ್ಯಂತ ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ಫ್ರಾಂಚೈಸಿ ‘ದೃಶ್ಯಂ’ ಇದೀಗ ಮೂರನೇ ಭಾಗದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅಭಿಷೇಕ್ ಪಾಠಕ್ ನಿರ್ದೇಶನದ ‘ದೃಶ್ಯಂ: ದಿ ಕನ್ಕ್ಲೂಷನ್’ (ದೃಶ್ಯಂ 3) ಸಿನಿಮಾ ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಸೂಚನೆ ನೀಡಿದೆ. ಅಜಯ್ ದೇವಗನ್, ಟಬು, ಶ್ರಿಯಾ ಶರಣ್, ಜೈದೀಪ್ ಅಹ್ಲಾವತ್ ಮತ್ತು ಪ್ರಕಾಶ್ ರಾಜ್ ನಟಿಸಿರುವ ಈ ಬಹುನಿರೀಕ್ಷಿತ ಚಿತ್ರದ ಟಿಕೆಟ್‌ಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಹೌಸ್‌ಫುಲ್

ದೇಶದ ಪ್ರಮುಖ ಮಲ್ಟಿಪ್ಲೆಕ್ಸ್ ಗಳಾದ ‘ಪಿವಿಆರ್ ಐನಾಕ್ಸ್’ ಮತ್ತು ‘ಸಿನೆಪೊಲಿಸ್’ ಗಳಲ್ಲಿ ಈ ಚಿತ್ರದ ಮುಂಗಡ ಬುಕಿಂಗ್‌ಗೆ ಅಭೂತಪೂರ್ವ ಪ್ರತ್ರಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನದ ಪ್ರದರ್ಶನಕ್ಕಾಗಿ ಕೇವಲ ಈ ಎರಡು ಮಲ್ಟಿಪ್ಲೆಕ್ಸ್ ಗಳಲ್ಲೇ ಸುಮಾರು 1.85 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಇದರಲ್ಲಿ ಪಿವಿಆರ್ ಐನಾಕ್ಸ್ ಒಂದರಲ್ಲೇ 1.47 ಲಕ್ಷ ಹಾಗೂ ಸಿನೆಪೊಲಿಸ್‌ನಲ್ಲಿ 37,000 ಟಿಕೆಟ್‌ಗಳು ಬುಕ್ ಆಗಿವೆ. ಶೀಘ್ರದಲ್ಲೇ ಈ ಸಂಖ್ಯೆ 2 ಲಕ್ಷ ತಲುಪುವ ನಿರೀಕ್ಷೆಯಿದೆ.

3.50 ಲಕ್ಷ ಟಾರ್ಗೆಟ್

ಪನೋರಮಾ ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರವು ಪ್ರದರ್ಶನ ಆರಂಭವಾಗುವಷ್ಟರಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಒಟ್ಟು 3.50 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡುವ ಅಂದಾಜಿದೆ. ಅಷ್ಟೇ ಅಲ್ಲದೆ, ಅಕ್ಟೋಬರ್ 2 ರ ಗಾಂಧಿ ಜಯಂತಿಯ ರಜೆ ಸಿನಿಮಾಗೆ ಮತ್ತಷ್ಟು ಆನೆಬಲ ತಂದೊಡ್ಡಲಿದೆ.

ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕರೆ, ‘ದೃಶ್ಯಂ 3’ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌‌ಬಸ್ಟರ್ ಹಿಸ್ಟರಿ ಸೃಷ್ಟಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Must Read