October 2, 2026
Friday, October 2, 2026
spot_img

ಕಾಡಾನೆಗೆ ಡಿಕ್ಕಿ ಹೊಡೆಯಲು ಯತ್ನಿಸಿದ ಚಾಲಕನಿಗೆ 5 ಸಾವಿರ ದಂಡ ವಿಧಿಸಿದ ಅರಣ್ಯ ಇಲಾಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಯ ಬಳಿಗೆ ಅಪಾಯಕಾರಿಯಾಗಿ ಲಾರಿ ಚಲಾಯಿಸಿದ ಚಾಲಕನಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಘಟನೆಯನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಚಾಲಕನನ್ನು ಪತ್ತೆಹಚ್ಚಿದ್ದು, ಕೇರಳದ ಮಲಪ್ಪುರಂ ಮೂಲದ ಜಿನ್‌ಶಾದ್ ಸಿ. ಎಂದು ಗುರುತಿಸಿದ್ದಾರೆ. ವನ್ಯಜೀವಿಗಳಿಗೆ ತೊಂದರೆ ಉಂಟುಮಾಡಿದ್ದಕ್ಕಾಗಿ ಹಾಗೂ ಅರಣ್ಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕನಿಗೆ ದಂಡ ವಿಧಿಸಲಾಗಿದೆ. ಬಂಡೀಪುರದಲ್ಲಿ ಓಡಾಡುವ ವಾಹನಗಳಿಗೆ ಅದರದ್ದೇ ಆದ ರೂಲ್ಸ್‌ ಇದೆ. ಈ ರೀತಿ ಅಪಾಯಕರವಾಗಿ ಆನೆಯ ಕಡೆಗೆ ಲಾರಿ ಚಲಾಯಿಸಿದ್ದು ತಪ್ಪು ಎಂದು ಇಲಾಖೆ ಹೇಳಿದೆ.

ಅರಣ್ಯ ಪ್ರದೇಶಗಳಲ್ಲಿ ವಾಹನ ಚಲಾಯಿಸುವಾಗ ವನ್ಯಜೀವಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅರಣ್ಯ ಇಲಾಖೆ ವಾಹನ ಸವಾರರಿಗೆ ಎಚ್ಚರಿಕೆ ನೀಡಿದೆ.

Must Read