October 2, 2026
Friday, October 2, 2026
spot_img

ಪಂಜಾಬ್ ಗಡಿಯಲ್ಲಿ BSF ಕಾರ್ಯಾಚರಣೆ: ಪಾಕ್ ನ ಇಬ್ಬರು ಒಳನುಸುಳುಕೋರರ ಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ನುಸುಳುವಿಕೆ ಯತ್ನವನ್ನು BSF ವಿಫಲಗೊಳಿಸಿದ್ದು, ಪಂಜಾಬ್‌ನ ತರ್ನ್ ತರನ್ ವಲಯದಲ್ಲಿ ಇಬ್ಬರು ಒಳನುಸುಳುಕೋರರು ಹತರಾಗಿದ್ದಾರೆ. ಮತ್ತೊಬ್ಬ ವ್ಯಕ್ತಿ ಗುಂಡಿನ ಚಕಮಕಿಯ ವೇಳೆ ಪಾಕಿಸ್ತಾನದತ್ತ ಹಿಂದಿರುಗಿದ್ದಾನೆ ಎಂದು BSF ತಿಳಿಸಿದೆ.

ಏನಿದು ಘಟನೆ?

ಶುಕ್ರವಾರ ಮಧ್ಯರಾತ್ರಿ ಸುಮಾರು 12.30ರ ವೇಳೆಗೆ ರಾಜೋಕೆ ಗಡಿ ಹೊರಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪಾಕಿಸ್ತಾನದ ಚಟ್ಟನ್‌ವಾಲೆ ಪ್ರದೇಶದ ಕಡೆಯಿಂದ ಕನಿಷ್ಠ ಮೂವರು ವ್ಯಕ್ತಿಗಳು ಭಾರತೀಯ ಗಡಿಯತ್ತ ಚಲಿಸುತ್ತಿರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ. ಅನುಮಾನಾಸ್ಪದ ಚಲನವಲನ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಎಚ್ಚರಿಸಿ, ಗಡಿ ದಾಟದಂತೆ ಸೂಚಿಸಲಾಗಿದೆ. ಆದರೆ ಎಚ್ಚರಿಕೆಯನ್ನು ಲೆಕ್ಕಿಸದೆ ಅವರು ಮುಂದುವರಿದ ಹಿನ್ನೆಲೆಯಲ್ಲಿ BSF ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ:

ಇಬ್ಬರು ಒಳನುಸುಳುಕೋರರು ಬಲಿ

ಭದ್ರತಾ ಪಡೆಗಳ ಪ್ರತಿಕ್ರಿಯೆಯಲ್ಲಿ ಇಬ್ಬರು ಒಳನುಸುಳುಕೋರರು ಮೃತಪಟ್ಟಿದ್ದು, ಮೂರನೇ ವ್ಯಕ್ತಿ ಅಲ್ಲಿಂದ ಹಿಂದೆ ಸರಿದು ಪಾಕಿಸ್ತಾನದ ಗಡಿಯೊಳಗೆ ತೆರಳಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಳಿಕ ಗಡಿ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಶಂಕಿತ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದೆ.

ಒಳನುಸುಳುಕೋರರ ಗುರುತು ಹಾಗೂ ಅವರು ಯಾವ ಉದ್ದೇಶದಿಂದ ಭಾರತೀಯ ಗಡಿಯತ್ತ ಬಂದಿದ್ದರು ಎಂಬ ಮಾಹಿತಿ ತಕ್ಷಣಕ್ಕೆ ಬಹಿರಂಗಗೊಂಡಿಲ್ಲ. ಘಟನೆಗೆ ಸಂಬಂಧಿಸಿದಂತೆ ಭದ್ರತಾ ಸಂಸ್ಥೆಗಳು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ಗಡಿಯುದ್ದಕ್ಕೂ ಕಟ್ಟುನಿಟ್ಟಿನ ಕಣ್ಗಾವಲು ಮುಂದುವರಿಸಲಾಗಿದೆ.

Must Read