October 2, 2026
Friday, October 2, 2026
spot_img

ದೊಡ್ಡಬಳ್ಳಾಪುರದಲ್ಲಿ ಕಸದ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು: ದೇಹದ ಭಾಗಗಳೆಲ್ಲ ತುಂಡು ತುಂಡು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೊಡ್ಡಬಳ್ಳಾಪುರದಲ್ಲಿ ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಯೊಬ್ಬರು ಮೃತಪಟ್ಟಿದ್ದಾರೆ.

ಎಂಎಸ್‌ಜಿಪಿ ಘಟಕದಲ್ಲಿ ಘಟನೆ ನಡೆದಿದ್ದು, ಕಾಡತಿಪ್ಪೂರು ಮೂಲದ ಅರಸಮ್ಮ ಮೃತೊಟ್ಟಿದ್ದಾರೆ. ಕಸ ವಿಂಗಡಿಸುವ ಯಂತ್ರ ಕಾರ್ಯನಿರ್ವಹಿಸುವ ವೇಳೆಯೇ ಮಹಿಳೆ ಬಿದ್ದ ಕಾರಣ ಅವರ ದೇಹದ ಭಾಗಗಳು ತುಂಡು ತುಂಡಾಗಿ ಕತ್ತರಿಸಿಹೋಗಿವೆ.

ಮಹಿಳೆ ಈ ಘಟಕದಲ್ಲಿ ಕಳೆದ ಮೂರ್ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬೆಂಗಳೂರಿನ ಕಸವನ್ನ ತಂದು ಈ ಘಟಕದಲ್ಲಿ ವಿಂಗಡಣೆ ಮಾಡಲಾಗುತ್ತಿತ್ತು. ಇಂದು ಬೆಳಗ್ಗೆ ಕಸ ವಿಂಗಡಣೆ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ.

ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದೆ.

Must Read