ಹೊಸದಿಗಂತ ಡಿಜಿಟಲ್ ಡೆಸ್ಕ್:
ದೊಡ್ಡಬಳ್ಳಾಪುರದಲ್ಲಿ ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಯೊಬ್ಬರು ಮೃತಪಟ್ಟಿದ್ದಾರೆ.
ಎಂಎಸ್ಜಿಪಿ ಘಟಕದಲ್ಲಿ ಘಟನೆ ನಡೆದಿದ್ದು, ಕಾಡತಿಪ್ಪೂರು ಮೂಲದ ಅರಸಮ್ಮ ಮೃತೊಟ್ಟಿದ್ದಾರೆ. ಕಸ ವಿಂಗಡಿಸುವ ಯಂತ್ರ ಕಾರ್ಯನಿರ್ವಹಿಸುವ ವೇಳೆಯೇ ಮಹಿಳೆ ಬಿದ್ದ ಕಾರಣ ಅವರ ದೇಹದ ಭಾಗಗಳು ತುಂಡು ತುಂಡಾಗಿ ಕತ್ತರಿಸಿಹೋಗಿವೆ.
ಮಹಿಳೆ ಈ ಘಟಕದಲ್ಲಿ ಕಳೆದ ಮೂರ್ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬೆಂಗಳೂರಿನ ಕಸವನ್ನ ತಂದು ಈ ಘಟಕದಲ್ಲಿ ವಿಂಗಡಣೆ ಮಾಡಲಾಗುತ್ತಿತ್ತು. ಇಂದು ಬೆಳಗ್ಗೆ ಕಸ ವಿಂಗಡಣೆ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ.
ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದೆ.



