October 6, 2026
Tuesday, October 6, 2026
spot_img

ಬಾರ್‌ ಡ್ಯಾನ್ಸರ್‌ ಮೇಲೆ ಅತಿಯಾದ ಪ್ರೀತಿ: 657 ಕೋಟಿ ಸರ್ಕಾರಿ ಹಣ ಲೂಟಿ ಮಾಡಿದ ಬ್ಯಾಂಕ್ ಮ್ಯಾನೇಜರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರೀತಿಗಾಗಿ ಎಂತೆಂತದೋ ಅಗ್ನಿಪರೀಕ್ಷೆಯನ್ನು ಪಾರು ಮಾಡುವ ಹುಡುಗರಿದ್ದಾರೆ. ಅದೇ ರೀತಿ ಪ್ರೀತಿಗಾಗಿ ಯಾವ ಹಂತಕ್ಕಾದರೂ ಇಳಿಯುವ ಹುಡುಗರೂ ಇದ್ದಾರೆ ಎನ್ನುವುದಕ್ಕೆ ಚಂಡೀಗಢದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿಯಾಗಿದೆ. ಚಂಡೀಗಢದಲ್ಲಿ ಬ್ಯಾಂಕ್‌ ನೌಕರನೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿಗಾಗಿ ಬರೋಬ್ಬರಿ 657 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಲೂಟಿ ಮಾಡಿದ್ದಾನೆ! ಆತ ವಿವಾಹಿತ ಎನ್ನುವ ವಿಷಯವನ್ನೂ ಮರೆಯುವಂತಿಲ್ಲ!

ಒಂದೆರಡು ಕೋಟಿಯಲ್ಲ, ಬರೋಬ್ಬರಿ 657 ಕೋಟಿ ರೂಪಾಯಿ ಹಣವನ್ನು ಸರ್ಕಾರಿ ಬೊಕ್ಕಸದಿಂದ ಈತ ಕದ್ದಿದಾನೆ. ಬ್ಯಾಂಕ್‌ ನೌಕರ ಪ್ರೀತಿಸಿದ ಹುಡುಗಿ ಬಾರ್‌ ಡ್ಯಾನ್ಸರ್‌ ಆಗಿದ್ದಳು. ಡ್ಯಾನ್ಸ್‌ ಮಾಡುವುದನ್ನು ನಿಲ್ಲಿಸು ಎಂದು ಆರೋಪಿ ರಿಭವ್‌ ರಿಷಿ ಕೇಳಿಕೊಂಡಿದ್ದರು. ಆಕೆ ಹಲವಾರು ವಿಷಯಗಳಿಗೆ ಹಣ ಬೇಕು ಹೀಗಾಗಿ ಕೆಲಸ ಬಿಡಲು ಆಗುವುದಿಲ್ಲ ಎಂದು ಹೇಳಿದ್ದಳು. ಇದಕ್ಕೆ ರಿಭವ್‌ ಆಕೆಗೆ ತಿಂಗಳಿಗೆ ಹತ್ತು ಲಕ್ಷ ರೂಪಾಯಿ ಪಾಕೆಟ್‌ ಮನಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ನೀರಿನಂತೆ ಹಣ ಖರ್ಚು

ಇತ್ತೀಚೆಗೆ ಸಿಬಿಐ ತನಿಖೆಯಿಂದ ಆಘಾತಕಾರಿ ಹಗರಣ ಬೆಳಕಿಗೆ ಬಂದಿದ್ದು, ಹರಿಯಾಣ ಮತ್ತು ಚಂಡೀಗಢದ ಸರ್ಕಾರಿ ಇಲಾಖೆಗಳ ಬ್ಯಾಂಕ್ ಖಾತೆಗಳಿಂದ ಬರೋಬ್ಬರಿ 657 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಲೂಟಿ ಮಾಡಿದ ಆರೋಪದ ಮೇಲೆ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಮಾಜಿ ಮ್ಯಾನೇಜರ್ ರಿಭವ್ ರಿಷಿ ಎಂಬಾತನ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದೆ. ಈತ ತಾನು ಪ್ರೀತಿಸುತ್ತಿದ್ದ ಬಾರ್ ಡಾನ್ಸರ್‌ಗಾಗಿ ಈ ಹಣವನ್ನು ನೀರಿನಂತೆ ಖರ್ಚು ಮಾಡಿರುವುದು ಬಹಿರಂಗಗೊಂಡಿದೆ.

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ನ ಮಾಜಿ ಶಾಖಾ ವ್ಯವಸ್ಥಾಪಕನಾಗಿರುವ ರಿಭವ್‌ ರಿಷಿಗೆ ಬಿಹಾರ ಮೂಲದ ಬಾರ್‌ ಡ್ಯಾನ್ಸರ್‌ ಪರಿಚಯವಾಗಿತ್ತು. ಕಾರ್ಯಕ್ರಮವೊಂದರಲ್ಲಿ ಆಕೆಯನ್ನು ರಿಭವ್‌ ಭೇಟಿ ಮಾಡಿದ್ದರು. ಲವ್‌ ಅಟ್‌ ಫಸ್ಟ್‌ ಸೈಟ್‌ ಎಂದು ನಂಬಿದ್ದರು. ತದನಂತರ ಬಾರ್‌ನಲ್ಲಿ ನೃತ್ಯ ಮಾಡಬೇಡ ಎಂದು ಹೇಳಿ ತಿಂಗಳಿಗೆ ಹತ್ತು ಲಕ್ಷ ರೂಪಾಯಿ ಹಣವನ್ನು ಪಾಕೆಟ್‌ ಮನಿ ಎಂದು ನೀಡುತ್ತಿದ್ದರು.

ಐಷಾರಾಮಿ ಬಂಗಲೆ, ಜೀವನ

ಇಷ್ಟೇ ಅಲ್ಲದೇ ಈವರೆಗೂ ಆಕೆಯ ಖಾತೆಗೆ 56 ಲಕ್ಷ ರೂಪಾಯಿಗಳನ್ನು ನೀಡಿದ್ದರು. ಜೊತೆಗೆ ದೆಹಲಿಯ ದ್ವಾರಕಾದಲ್ಲಿ ನಾಲ್ಕು ಕೋಟಿ ರೂಪಾಯಿಯ ಮನೆಯನ್ನು ಖರೀದಿ ಮಾಡಿ ನೀಡಿದ್ದ. ದುಬೈ, ಥೈಲೆಂಡ್‌ ಲಕ್ಷುರಿ ಪ್ರವಾಸ, ಬುರ್ಹ್‌ ಅಲ್‌ ಅರಬ್‌ ಎದುರಿಎ ಡ್ಯೂಪ್ಲೆಕ್ಸ್‌ ವಿಲ್ಲಾದಲ್ಲಿ ಸ್ಟೇ ಮಾಡಿದ್ದರು.

ಹೆಂಡತಿಯಿದ್ದರೂ ಗರ್ಲ್‌ಫ್ರೆಂಡ್‌ ಮಾಡಿಕೊಂಡಿದ್ದ ರಿಭವ್‌

ಸರ್ಕಾರಿ ಇಲಾಖೆಗಳಾದ ಹರಿಯಾಣ ಸ್ಕೂಲ್ ಶಿಕ್ಷಣ ಪರಿಯೋಜನಾ ಪರಿಷತ್ ಮತ್ತು ಹರಿಯಾಣ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯ ಹಣವನ್ನು ನಕಲಿ ದಾಖಲೆಗಳು ಮತ್ತು ಶೆಲ್ ಕಂಪನಿಗಳ ಮೂಲಕ ರಿಷಿ ಬೇರೆಡೆಗೆ ವರ್ಗಾಯಿಸಿದ್ದ. ತನಿಖೆಯ ವೇಳೆ ರಿಷಿ ಖಾತೆಗೆ ಕೋಟ್ಯಂತರ ರೂಪಾಯಿ ಬಂದಿರುವುದು ಹಾಗೂ ಆತನ ಪತ್ನಿ ದಿವ್ಯಾ ಅರೋರಾ ಖಾತೆಗೆ 18.32 ಕೋಟಿ ರೂ. ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಹೆಂಡತಿಯಿದ್ದರೂ ಬಾರ್‌ ಡ್ಯಾನ್ಸರ್‌ ಜೊತೆ ಪ್ರೀತಿಗೆ ಬಿದ್ದು, ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗಿದೆ.

Must Read