October 7, 2026
Wednesday, October 7, 2026
spot_img

ದಿನಭವಿಷ್ಯ: ಅನಿರೀಕ್ಷಿತ ಬೆಳವಣಿಗೆಗಳು ಎದುರಾಗಲಿದೆ, ಸಮಸ್ಯೆಗಳನ್ನು ದೃಢ ಮನಸ್ಸಿನಿಂದ ನಿಭಾಯಿಸಿ

ಮೇಷ
ಕೆಲವು ಅನಿರೀಕ್ಷಿತ ಬೆಳವಣಿಗೆ. ಹೊಸ ಸಮಸ್ಯೆ. ನಿಮ್ಮಿಂದ ಪರಿಹಾರ ಕಷ್ಟವಲ್ಲ. ದೃಢ ಮನಸ್ಸಿನ ಕ್ರಮ ಅಗತ್ಯ. ಬಂಧು ಭೇಟಿ. ಆರ್ಥಿಕ ಸ್ಥಿರತೆ.
ವೃಷಭ
ಬಾಕಿ ಕೆಲಸಗಳು ಉಳಿದಿದ್ದರೆ ಮೊದಲು ಪೂರೈಸಿರಿ. ಸಂಜೆ ವೇಳೆ ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲಕ್ಷೇಪ. ಪ್ರೇಮಿಗಳ ಮಧ್ಯೆ ಒಡಕು.
ಮಿಥುನ
ನಿಮ್ಮ ನಡೆಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಿ. ಆರೋಗ್ಯದ ಮತ್ತು ಸಂತಸದ ಬದುಕು ಸಾಧ್ಯ. ದೊಡ್ಡ ಮಟ್ಟದ ವೆಚ್ಚಕ್ಕೆ ಕೈಹಾಕಬೇಡಿ.
ಕಟಕ
ಕೆಲಸದ ಒತ್ತಡದಿಂದ ಮುಕ್ತಿ. ನಿಮ್ಮ ಇಷ್ಟದ ಕಾರ್ಯ ನಡೆಸಲು ಅವಕಾಶ. ಧನಲಾಭ. ಅತಿ ಆಹಾರಸೇವನೆ ಜಡತ್ವಕ್ಕೆ ಕಾರಣವಾದೀತು.
ಸಿಂಹ
ಎಲ್ಲರು ಮೆಚ್ಚುವ ಸಾಧನೆ ನಿಮ್ಮದು. ಅಶಾಂತಿ ಪರಿಹಾರ. ಕಠಿಣ ಕಾರ್ಯ ಸುಲಭದಲ್ಲಿ ಪೂರ್ಣ. ಹೊಸ ಹೊಣೆಗಾರಿಕೆ ಈಗ ಹೊತ್ತುಕೊಳ್ಳದಿರಿ.
ಕನ್ಯಾ
ಮನಸ್ಸೇಕೋ ಉದಾಸ. ಎಲ್ಲರ ಜತೆ ಬೆರೆಯಲು ಮನಸ್ಸು ಬಾರದು. ಕಾರಣವಿಲ್ಲದ ಚಿಂತೆ. ಕೆಲವರಿಗೆ ಹೊಟ್ಟೆ ನೋವು ಕಾಡಬಹುದು.
ತುಲಾ
ನೀವಿಂದು ಪ್ರಮುಖ ವಿಷಯದಲ್ಲಿ ಸ್ಪಷ್ಟ ನಿರ್ಧಾರ ತಾಳಬೇಕು. ಗೊಂದಲಕ್ಕೆ ಆಸ್ಪದ ನೀಡಬೇಡಿ. ದೈಹಿಕ ನೋವು ಎದುರಿಸುವಿರಿ.
ವೃಶ್ಚಿಕ
ಪ್ರೀತಿಯ ವಿಷಯ ಅಥವಾ ಕೌಟುಂಬಿಕ ಪರಿಸರ ಸಕಾರಾತ್ಮಕ ಬದಲಾವಣೆ ಕಾಣಲಿದೆ. ಸಮಸ್ಯೆ ನಿವಾರಣೆ. ಬಂಧುಗಳ ಸಹಕಾರ.
ಧನು
ಕೆಲ ವಿಚಾರಗಳಲ್ಲಿ ಗೊಂದಲದ ಮನಸ್ಥಿತಿ. ಸ್ಪಷ್ಟತೆ ಕಾಣದೆ ತೊಳಲಾಟ.ವಿವೇಕದಿಂದ ವರ್ತಿಸಿ, ಇತರರನ್ನು ನಿಯಂತ್ರಿಸಲು ಹೋಗದಿರಿ.
ಮಕರ
ವೃತ್ತಿಯಲ್ಲಿ ಹೆಚ್ಚು ಎಚ್ಚರದಿಂದಿರಿ. ಪ್ರತಿಕೂಲ ಸನ್ನಿವೇಶ ಎದುರಾದೀತು. ಇದರ ಮಧ್ಯೆಯೇ ಆರ್ಥಿಕ ಉನ್ನತಿ. ಮುಖ್ಯ ಯೋಜನೆ ಯಶಸ್ಸು.
ಕುಂಭ
ನಿಮ್ಮ ಸುತ್ತಲಿನ ಪರಿಸರ ಬಿಗುವಾಗಿದೆ ಎಂದೆನಿಸಲಿದೆ. ನೀವೂ ಅದಕ್ಕೆ ಹೊಂದಿಕೊಳ್ಳಿ. ಕೆಲಸದಲ್ಲಿ ಭಾರೀ ಒತ್ತಡ. ಇತರರ ಅಸಹಕಾರ.
ಮೀನ
ಏರುಪೇರಿನ ದಿನ. ಸಂತೋಷ, ಬೇಸರ ಎರಡೂ ಅನುಭವಿಸುವಿರಿ. ಪ್ರೀತಿಗೆ ಅಡ್ಡಿ. ಒತ್ತಡ ಕಳೆಯಲು ಸಂಗೀತ, ಅಧ್ಯಾತ್ಮ ನೆರವಾದೀತು.

Must Read