ಹೊಸದಿಗಂತ ವರದಿ ಭಟ್ಕಳ:
ಯಾವುದೇ ಪರವಾನಗಿ ಇಲ್ಲದೇ ಅಕ್ರಮ ಮತ್ತು ಹಿಂಸಾತ್ಮಕವಾಗಿ ಸುಮಾರು 13 ಲಕ್ಷ ಮೌಲ್ಯದ 13 ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಗ್ರಾಮೀಣ ಠಾಣೆಯ ಪೊಲೀಸರು ಶಿರಾಲಿ ಚೆಕ್ಪೋಸ್ಟ್ ಬಳಿ ನಡೆದ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದ್ದು, ಚಾಲಕ, ಕ್ಲೀನರ್ ಪರಾರಿ ಆಗಿದ್ದಾರೆ.

ಲಾರಿಯಲ್ಲಿ 13 ಜಾನುವಾರುಗಳನ್ನು ಯಾವುದೇ ಸಾಗಾಟ ಪರವಾನಗಿ ಇಲ್ಲದೆ, ಹಿಂಸಾತ್ಮಕವಾಗಿ ಕಟ್ಟಲಾಗಿತ್ತು.ಜಾನುವಾರುಗಳಿಗೆ ಸಮರ್ಪಕವಾಗಿ ನೀರು ಹಾಗೂ ಮೇವು ನೀಡದೇ ಸಾಗಿಸಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರು ಜಾನುವಾರುಗಳನ್ನು ರಕ್ಷಿಸಿ, ಲಾರಿಯನ್ನು ವಶಕ್ಕೆ ಪಡೆದುಕೊಂಡು ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ಲಾರಿ ಚಾಲಕ ಹಾಗೂ ಕ್ಲೀನರ್ ಪಟ್ಟೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



