October 7, 2026
Wednesday, October 7, 2026
spot_img

ಸಿದ್ಧಾರ್ಥ್-ಕಿಯಾರಾ ಬಾಳಲ್ಲಿ ಮತ್ತೆ ಹರುಷ: ಮಲ್ಹೋತ್ರಾ ಕುಟುಂಬಕ್ಕೆ ಹೊಸ ಸದಸ್ಯ ಆಗಮನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಮುದ್ದಾದ ಜೋಡಿಗಳಲ್ಲಿ ಒಂದಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ನೀಡಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಅತೀ ದೊಡ್ಡ ಖುಷಿಯ ಸುದ್ದಿಯೊಂದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದು, ಸದ್ಯ ಈ ಜೋಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಂದರವಾದ ಫೋಟೋ ಒಂದನ್ನು ಹಂಚಿಕೊಳ್ಳುವ ಮೂಲಕ ಈ ಶುಭ ಸುದ್ದಿಯನ್ನು ದಂಪತಿ ಅಧಿಕೃತಗೊಳಿಸಿದ್ದಾರೆ. ಫೋಟೋದಲ್ಲಿ ಸಿದ್ಧಾರ್ಥ್, ಕಿಯಾರಾ ಹಾಗೂ ಅವರ ಮುದ್ದಾದ ಮಗಳು ಸರಾಯಾ ಮೂವರೂ ಸೇರಿ, ಪುಟಾಣಿ ಮಗುವಿನ ಬೂಟೀಸ್ ತಮ್ಮ ಕೈಗಳಲ್ಲಿ ಹಿಡಿದುಕೊಂಡಿದ್ದಾರೆ. ಫೋಟೋದೊಂದಿಗೆ ಕಿಯಾರಾ ಅವರು ಅತ್ಯಂತ ಭಾವನಾತ್ಮಕ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. “ಜೀವನದ ಅತಿದೊಡ್ಡ ಉಡುಗೊರೆಯೊಂದಿಗೆ ನಮಗೆ ಮತ್ತೆ ಆಶೀರ್ವಾದ ಸಿಕ್ಕಿದೆ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ” ಎಂದು ಬರೆದುಕೊಂಡಿದ್ದಾರೆ.

https://www.instagram.com/p/DeLjG5No1wI/?utm_source=ig_web_button_share_sheet

ವಿಶೇಷವೆಂದರೆ ಈ ಸುಂದರ ಘಳಿಗೆಯಲ್ಲಿ ಮೊದಲ ಮಗಳು ‘ಸರಾಯಾ’ ಕೂಡ ಭಾಗಿಯಾಗಿದ್ದಾಳೆ. ತಂದೆ-ತಾಯಿಯ ಜೊತೆಗೆ ತನ್ನ ಪುಟ್ಟ ಕೈಗಳನ್ನು ಜೋಡಿಸಿರುವ ಸರಾಯಾ, ಈಗ ಅಕ್ಕನಾಗುವ ಸಂಭ್ರಮದಲ್ಲಿದ್ದಾಳೆ.

ಈ ಪೋಸ್ಟ್ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದ್ದು, ನಟಿ ರೇಖಾ, ಕರಣ್ ಜೋಹರ್ ಸೇರಿದಂತೆ ಹಲವು ನಟ-ನಟಿಯರು, ತಾರೆಯರು ಹಾಗೂ ಕೋಟ್ಯಂತರ ಅಭಿಮಾನಿಗಳು ದಂಪತಿಗೆ ಅಭಿನಂದನೆಗಳ ಸುರಿಮಳೆ ಗೈಯುತ್ತಿದ್ದಾರೆ. ಬೆಳ್ಳಿಪರದೆಯ ಮೇಲಿನ ಕೆಮಿಸ್ಟ್ರಿಯಿಂದ ನಿಜ ಜೀವನದ ಯಶಸ್ವಿ ದಂಪತಿಯಾಗಿ ಹೊರಹೊಮ್ಮಿರುವ ಸಿದ್ಧಾರ್ಥ್-ಕಿಯಾರಾ ಜೋಡಿಯ ಈ ಹರುಷದ ಕ್ಷಣಕ್ಕೆ ಇಡೀ ಚಿತ್ರರಂಗವೇ ಶುಭ ಹಾರೈಸುತ್ತಿದೆ.

Must Read