November 23, 2026
Monday, November 23, 2026
spot_img

ವಿಶ್ವದಲ್ಲಿ ಇಂಧನ ಬೆಲೆ ಏರಿಕೆ ಬಿರುಗಾಳಿ, ಭಾರತದಲ್ಲಿ ಶೇ.7 ಮಾತ್ರ ಏರಿಕೆ: ಕೇಂದ್ರ ಸಚಿವ ಪುರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೇವಲ ಶೇ.7ರಷ್ಟು ಮಾತ್ರ ಏರಿಕೆಯಾಗಿದ್ದರೆ, ಜಗತ್ತಿನ ಪ್ರಬಲ ಆರ್ಥಿಕತೆಯ ದೇಶಗಳಲ್ಲಿ ಈ ಏರಿಕೆ ಶೇ.50ರಿಂದ ಶೇ.70ರಷ್ಟಾಗಿದೆ ಎಂದು ಕೇಂದ್ರ ತೈಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಕೇಂದ್ರದ ಮೋದಿ ಸರ್ಕಾರ ಅಬಕಾರಿ ಸುಂಕದಲ್ಲಿ ಮೂರು ಬಾರಿ ಇಳಿಕೆ ಮಾಡುವ ಮೂಲಕ ತೈಲ ಬೆಲೆ ಏರಿಕೆಯ ಹೊರೆ ದೇಶದ ಜನತೆಗೆ ಬೀಳದಂತೆ ಮಾಡಿದೆ. ಹಾಗೆಯೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕೂಡ ನಷ್ಟವನ್ನು ಗ್ರಾಹಕರಿಗೆ ವರ್ಗಾಯಿಸದೆ ತಾವೇ ಅನುಭವಿಸಿವೆ. ಈ ನಿಟ್ಟಿನಲ್ಲಿ ಬಿಪಿಸಿಎಲ್, ಐಒಸಿಎಲ್, ಎಚ್‌ಪಿಸಿಎಲ್‌ನಂತಹ ಸರ್ಕಾರಿ ಸ್ವಾಮ್ಯದ ಕಂಪನಿಗಳು ಜವಾಬ್ದಾರಿಯುತ ಕಾರ್ಪೊರೇಟ್ ನಾಗರಿಕರಂತೆ ವರ್ತಿಸಿವೆ. ನಷ್ಟವಾದರೂ ಗ್ರಾಹಕರ ಮೇಲೆ ಹೊರೆ ಹೊರಿಸಲು ಮುಂದಾಗಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಮಧ್ಯಪ್ರಾಚ್ಯ ಸಂಘರ್ಷ, ರಷ್ಯಾ-ಉಕ್ರೇನ್ ಸಂಘರ್ಷ ಸೇರಿದಂತೆ ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ವಿವರಿಸಿದ ಸಚಿವರು, 2021ರ ನವೆಂಬರ್‌ನಿಂದ ಮೂರು ಸಂದರ್ಭಗಳಲ್ಲಿ ಕೇಂದ್ರವು ಅಬಕಾರಿ ಸುಂಕವನ್ನು ಕಡಿತ ಮಾಡಿ ಜನತೆಗೆ ಇಂಧನ ಬೆಲೆ ಏರಿಕೆಯ ಹೊರೆ ಬೀಳದಂತೆ ತಡೆಯಲಾಗಿದೆ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಇಂಧನ ಬೆಲೆ ಇಳಿಕೆಯಾಗಿದ್ದರೆ, ಇದೇ ವೇಳೆ ಜಾಗತಿಕ ಮಟ್ಟದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಶೇ.50ರಿಂದ ಶೇ.70ರಷ್ಟು ಏರಿಕೆಯಾಗಿದೆ ಎಂದರು. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ತೈಲ ಬೆಲೆಗಳು ಗಗನಕ್ಕೇರಿದ್ದವು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಇಂದಿಗೂ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಏರುತ್ತಲೇ ಇವೆ. ಇತ್ತೀಚೆಗೆ ತೈಲ ಉತ್ಪಾದಕ ಅರಬ್ ದೇಶಗಳಲ್ಲಿ ಕಂಡುಬಂದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತೈಲ ಬೆಲೆಗಳು ಏರಿಕೆಯಾಗಿರುವುದೂ ಇಲ್ಲಿ ಉಲ್ಲೇಖನೀಯ.

ದೇಶದ ತೈಲ ಬಿಲ್ ಏರುತ್ತಲೇ ಇದೆ

ಇಷ್ಟಾಗಿಯೂ ಭಾರತವು ಪೆಟ್ರೋಲ್, ಡೀಸೆಲ್ ಮತ್ತು ಅನಿಲಗಳ ಆಮದಿಗಾಗಿ ಮಾಡುತ್ತಿರುವ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಅಕ್ಟೋಬರ್‌ನಲ್ಲಿ ಆಮದು ಬಿಲ್ 2025ರ ಅಕ್ಟೋಬರ್‌ನಲ್ಲಿ 10 ಬಿಲಿಯನ್ ಡಾಲರ್ ಆಗಿದ್ದರೆ, ಈ ವರ್ಷ 16 ಬಿಲಿಯನ್ ಡಾಲರ್‌ಗೆ ತಲುಪುವ ಮೂಲಕ ಶೇ.60ರಷ್ಟು ಹೆಚ್ಚಿದೆ. ಬ್ಯಾರೆಲ್ ತೈಲ ಬೆಲೆ ಸರಾಸರಿ 124.77 ಡಾಲರ್‌ಗೆ ತಲುಪಿತ್ತು. ಹಾಗೆಯೇ ಧ್ರುವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಆಮದು ವೆಚ್ಚ 1.3 ಬಿಲಿಯನ್ ಡಾಲರ್‌ಗೆ ತಲುಪಿದೆ. ಇದೇ ವೇಳೆ ಭಾರತವು 6.3 ಬಿಲಿಯನ್ ಡಾಲರ್ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಿದೆ.

Must Read