October 9, 2026
Friday, October 9, 2026
spot_img

ನಟ ನಾನಾ ಪಾಟೇಕರ್ ‘ಅಸ್ವಾಭಾವಿಕ ಸಾವು’?: ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡ ಗೋವಾ ಪೊಲೀಸ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿರಿಯ ನಟ ನಾನಾ ಪಾಟೇಕರ್ ನಿಧಾನಕ್ಕೆ ಸಂಬಂಧಿಸಿ ಗೋವಾ ಪೊಲೀಸರು ‘ಅಸ್ವಾಭಾವಿಕ ಸಾವು’ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಗುರುವಾರ ಬೆಳಗಿನ ಜಾವ ತೀವ್ರ ಅಸ್ವಸ್ಥಗೊಂಡಿದ್ದ ನಾನಾ ಅವರನ್ನು ಗೋವಾದ ದೋನಾ ಪೌಲಾದ ಓಷನ್ ಪಾರ್ಕ್ನಲ್ಲಿರುವ ಅವರ ನಿವಾಸದಿಂದ ಬಾಂಬೋಲಿಮ್‌ನ ಆಸ್ಪತ್ರೆಗೆ ಕರೆತರಲಾಗಿದ್ದು, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಆಸ್ಪತ್ರೆಯ ವೈದ್ಯರ ಮಾಹಿತಿ ಪ್ರಕಾರ, ನಾನಾ ಪಾಟೇಕರ್ ಅವರಿಗೆ ಮೊದಲಿನಿಂದಲೇ ಹೃದಯ ಸಂಬಂಧಿ ಕಾಯಿಲೆ ಇತ್ತು. ಅದಕ್ಕೆ ಅವರು ಚಿಕಿತ್ಸೆ ಕೂಡಾ ಪಡೆಯುತ್ತಿದ್ದರು. ಹೀಗಾಗಿ ಅವರ ಸಾವಿಗೆ ಹೃದಯಾಘಾತವೇ ಕಾರಣವೇ ಎಂದು ಶಂಕಿಸಲಾಗಿದೆ. ಈ ಕುರಿತ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಇದೀಗ ಗೋವಾ ಪೊಲೀಸರು ಬಿಎನ್‌ಎಸ್ 194ರ ಅಡಿಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಪಿಎಸ್‌ಐ ನಿತಿನ್ ನಾಯಕ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

ಗುರುವಾರ ಸಂಜೆ ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆಯು ಪುಣೆಯ ದೊಂಜೆ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

Must Read