October 10, 2026
Saturday, October 10, 2026
spot_img

ಬಿಗ್‌ಬಾಸ್‌ ಮನೆಯಲ್ಲಿ ಬರೀ ಬೀಪ್‌ ಬೀಪ್‌ ಸದ್ದು: ಕಂಟೆಸ್ಟೆಂಟ್‌ಗಳಿಗೆ ಎಲಿಮಿನೇಷನ್‌ ಭೀತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಗ್‌ ಬಾಸ್‌ ಮನೆಯಲ್ಲಿ ದಿನದಿನಕ್ಕೂ ಗಲಾಟೆ ಜಗಳಗಳು ಹೆಚ್ಚುತ್ತಲೇ ಇವೆ. ಇದೀಗ ಸ್ಪರ್ಧಿಗಳ ನಡುವಿನ ವಾಗ್ವಾದದಲ್ಲಿ ಬರೀ ಅವಾಚ್ಯ ಶಬ್ದಗಳ ಬಳಕೆ ಮಾಡಲಾಗುತ್ತಿದ್ದು, ಹಿರಿಯರು, ಮಕ್ಕಳು ಶೋ ನೋಡಲು ಇಷ್ಟಪಡುತ್ತಿಲ್ಲ.

ಸೌಂದರ್ಯಾ, ಮಂಜು, ಗಾನವಿ ಹಾಗೂ ಗಗನ್‌ ತಮ್ಮ ಜಗಳದ ಭರತದಲ್ಲಿ ಕೆಟ್ಟ ಪದಗಳನ್ನು ಬಳಕೆ ಮಾಡಿದ್ದು, ಬೀಪ್‌ ಸದ್ದು ಹಾಕಲಾಗಿದೆ. ಎಪಿಸೋಡ್‌ನ ಅರ್ಧಭಾಗದಷ್ಟು ಬರೀ ಬೀಪ್‌ ಸದ್ದುಗಳೇ ಇದ್ದು, ಈ ವಾರದ ಕಿಚ್ಚ ಸುದೀಪ ಅವರ ಪಂಚಾಯತಿ ಬಗ್ಗೆ ಜನ ಸಾಕಷ್ಟು ಕುತೂಹಲ ಹೊಂದಿದ್ದಾರೆ. ಈ ಹಿಂದೆ ಬಿಗ್‌ಬಾಸ್‌ನಲ್ಲಿ ಇತರ ಕಂಟೆಸ್ಟೆಂಟ್‌ಗಳ ಜೊತೆ ವಾಗ್ವಾದ ಕೆಟ್ಟ ಪದಗಳ ಬಳಕೆ ಮಾಡಿದ್ದರು. ಈ ಕಾರಣದಿಂದ ಅವರನ್ನು ಹೊರಕ್ಕೆ ಕರೆತರಲಾಗಿತ್ತು. ಇದೀಗ ಮನೆಯೊಳಗೆ ಮತ್ತೆ ಇಂತಹ ಬೆಳವಣಿಗೆಗಳು ನಡೆಯುತ್ತಿರುವುದರಿಂದ ಜಗದೀಶ್‌ ಪ್ರಕರಣವನ್ನು ವೀಕ್ಷಕರು ನೆನಪಿಸಿಕೊಳ್ಳುತ್ತಿದ್ದಾರೆ.

ಇತ್ತೀಚಿನ ಗಲಾಟೆಗಳ ವೇಳೆ ಮಂಜು, ಗಾನವಿ, ಗಗನ್‌ ಹಾಗೂ ಸೌಂದರ್ಯಾ ಬಳಸಿದ ಕೆಲವು ಪದಗಳಿಗೆ ಪ್ರಸಾರದ ಸಂದರ್ಭದಲ್ಲಿ ‘ಬೀಪ್‌’ ಹಾಕಲಾಗಿದೆ ಎನ್ನಲಾಗಿದೆ. ಕುಟುಂಬದವರ ವಿಚಾರವಾಗಿ ಮಾತಿನ ಚಕಮಕಿ, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ವಾಗ್ವಾದ ಮತ್ತು ಕಳಪೆ ಪ್ರಕ್ರಿಯೆ ವಿಚಾರವಾಗಿ ನಡೆದ ಗಲಾಟೆಗಳು ಮನೆಯ ವಾತಾವರಣವನ್ನು ಮತ್ತಷ್ಟು ಬಿಸಿಯಾಗಿಸಿವೆ.ವಾರಾಂತ್ಯದ ಪಂಚಾಯ್ತಿಯಲ್ಲಿ ನಿರೂಪಕ ಕಿಚ್ಚ ಸುದೀಪ್‌ ಈ ವಿಚಾರಗಳ ಬಗ್ಗೆ ಮಾತನಾಡುತ್ತಾರಾ ಎಂಬ ಕುತೂಹಲ ವೀಕ್ಷಕರಲ್ಲಿದೆ. ತಪ್ಪು ಮಾಡಿದ ಸ್ಪರ್ಧಿಗಳಿಗೆ ಸುದೀಪ್‌ ಕ್ಲಾಸ್‌ ತೆಗೆದುಕೊಳ್ಳುತ್ತಾರಾ ಅಥವಾ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Must Read