October 12, 2026
Monday, October 12, 2026
spot_img

ಕರ್ಕಶ ಸೈಲೆನ್ಸರ್ ಹಾವಳಿಗೆ ಖಾಕಿ ಬ್ರೇಕ್: ನಿಯಮ ಮೀರಿದರೆ ಬೀಳುತ್ತೆ ಭಾರೀ ದಂಡ!

ಹೊಸದಿಗಂತ ವರದಿ ಕಾರವಾರ:

ಶಬ್ದ ಮಾಲಿನ್ಯಕ್ಕೆ ಕಾರಣವಾಗುವ ಮತ್ತು ಸಾರ್ವಜನಿಕರಿಗೆ ತೊಂದರೆ ಆಗುವಂತ ದೋಷಪೂರಿತ ಹಾಗೂ ಮಾರ್ಪಡಿಸಿದ ಸೈಲೆನ್ಸರ್ ಗಳನ್ನು ಅಳವಡಿಸಿ ಸಂಚರಿಸುವ ವಾಹನಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಈಗಾಗಲೇ ಕಾರವಾರ ಸಂಚಾರ ಪೊಲೀಸರು ನಡೆಸಿರುವ ವಿಶೇಷ ಕಾರ್ಯಾಚರಣೆಯಲ್ಲಿ ದೋಷಪೂರಿತ ಕರ್ಕಶ ಸೈಲೆನ್ಸರ್ ಅಳವಡಿಸಿದ ವಾಹನಗಳಿಗೆ ಸಂಬಂಧಿಸಿದಂತೆ 7 ಪ್ರಕರಣಗಳನ್ನು ದಾಖಲಿಸಿದ್ದು ಇದೇ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ 31 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಜಿಲ್ಲೆಯಲ್ಲಿ ವಾಹನಗಳ ಸವಾರರು ತಮ್ಮ ವಾಹನಗಳಿಗೆ ಕಾನೂನುಬಾಹಿರವಾಗಿ ಮಾರ್ಪಡಿಸಿದ ಸೈಲೆನ್ಸರ್ ಗಳನ್ನು ಅಳವಡಿಸಬಾರದು, ಸಾರ್ವಜನಿಕರಿಗೆ ಅನಾನುಕೂಲ
ಉಂಟಾಗುವ ರೀತಿಯಲ್ಲಿ ವಾಹನಗಳನ್ನು ಚಲಾಯಿಸಬಾರದು, ವಾಹನಗಳ ಮೂಲ ವಿನ್ಯಾಸ ಮತ್ತು ನಿಗದಿತ ಶಬ್ದಮಟ್ಟದ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಸೂಚಿಸಲಾಗಿದೆ.


ಮುಂದಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಜಿಲ್ಲಾದ್ಯಂತ ನಿರಂತರ ತಪಾಸಣೆ ನಡೆಸಿ ವಾಹನ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Must Read