ಹೊಸದಿಗಂತ ವರದಿ ಬಾಗಲಕೋಟೆ :
ಕಬ್ಬಿಗೆ ಎಂಎಸ್ ಪಿ ದರ ನಿಗದಿ, ಕಮರ್ಸಿಯಲ್ ಸಕ್ಕರೆಗೆ 100 ರೂ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರೈತರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಗದ್ದನಕೇರಿ ಕ್ರಾಸ್ ಸಮೀಪ ಹಾಯ್ದು ಹೋಗಿರುವ ಬೆಳಗಾವಿ ಬಾಗಲಕೋಟೆ ಮತ್ತು ಹುಬ್ಬಳ್ಳಿ ವಿಜಯಪುರ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದರು.
ಹೆದ್ದಾರಿ ಬಂದ್ ಹಿನ್ನಲೆಯಲ್ಲಿ ಬಸ್ ಸಂಚಾರ, ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಬಸ್ ಇಲ್ಲದೆ ಸಾರ್ವಜನಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತ. ಬೆಳಗ್ಗೆ ಸ್ಕೂಲ್, ಕಾಲೇಜ್ ಗೆ ಹೋದ ವಿದ್ಯಾರ್ಥಿಗಳು ಮರಳಿ ಬರುವಾಗ ಬಸರ ಇಲ್ಲದೇ ವಿದ್ಯಾರ್ಥಿಗಳು ಪರದಾಡಿದಂತ ಸ್ಥಿತ ನಿರ್ಮಾಣವಾಗಿತ್ತ.ಕೆಲವರು ಬಸ್ ನಿಲ್ದಾಣದಲ್ಲಿ ಕಾಲ ಕಳೆಯುವಂತಾಯಿತು. ರೈತರು ತಮ್ಮ ಮನೆಯಿಂದ ಬುತ್ತಿ ತಂದು ಹೆದ್ದಾರಿಯಲ್ಲಿ ಕುಳಿತು ಊಟ ಮಾಡುವ ಮೂಲಕ ರೈತರು ಹೋರಾಟ ನಡೆಸಿದರು.



