October 13, 2026
Tuesday, October 13, 2026
spot_img

ತಿರುಪತಿಯಲ್ಲಿ ‘ರಣಬಾಲಿ’ ಜೋಡಿ ಪ್ರತ್ಯಕ್ಷ: ತಿಮ್ಮಪ್ಪನ ಸನ್ನಿಧಿಯಲ್ಲಿ ದಂಪತಿ ವಿಶೇಷ ಪೂಜೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಸ್ಟಾರ್ ಜೋಡಿಯಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸದ್ಯ ತಮ್ಮ ಮುಂಬರುವ ಬಹುನಿರೀಕ್ಷಿತ ‘ರಣಬಾಲಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯ ಬಳಿಕ ಇಬ್ಬರೂ ಒಟ್ಟಿಗೆ ನಟಿಸಿರುವ ಮೊದಲ ಸಿನಿಮಾ ಇದಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಚಿತ್ರದ ಪ್ರಚಾರದ ಯಶಸ್ಸಿಗಾಗಿ ಈ ಜನಪ್ರಿಯ ದಂಪತಿ ತಿರುಪತಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿ ತಿಮ್ಮಪ್ಪನ ಕೃಪೆಗೆ ಪಾತ್ರರಾಗಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಅವರು ತಾವು ನಟಿಸಿರುವ ‘ರಣಬಾಲಿ’ ಸಿನಿಮಾದ ವಿಶೇಷ ಗೆಟಪ್‌ನಲ್ಲಿಯೇ ತಿರುಪತಿಗೆ ಆಗಮಿಸಿದ್ದು ವಿಶೇಷವಾಗಿತ್ತು. ವಿಜಯ್ ಅವರು ಸಿನಿಮಾದಲ್ಲಿ ಧರಿಸಿದಂತೆ ದೋತಿ ಹಾಗೂ ಬಿಳಿ ಕುರ್ತಾದಲ್ಲಿ ಕಾಣಿಸಿಕೊಂಡರೆ, ರಶ್ಮಿಕಾ ಮಂದಣ್ಣ ಹಸಿರು ಬಣ್ಣದ ಸುಂದರ ಸೀರೆಯಲ್ಲಿ ಮಿಂಚಿದರು. ಈ ನವ ದಂಪತಿಯನ್ನು ಕಣ್ಣಾರೆ ಕಾಣಲು ತಿರುಮಲದಲ್ಲಿ ಅಭಿಮಾನಿಗಳು ಮುಗಿಬಿದ್ದಿದ್ದರು.

ದೇವಾಲಯದ ಆವರಣದಲ್ಲಿ ನೆಚ್ಚಿನ ಜೋಡಿಯನ್ನು ನೋಡಲು ಜನತೆ ಮುಗಿಬಿದ್ದ ಪರಿಣಾಮ ನೂಕಾಟ-ತಳ್ಳಾಟ ಉಂಟಾಯಿತು. ಈ ಸಂದರ್ಭದಲ್ಲಿ ಅಭಿಮಾನಿಗಳ ನೂಕುನುಗ್ಗಲಿನ ನಡುವೆಯೂ ವಿಜಯ್ ದೇವರಕೊಂಡ ಅವರು ತಮ್ಮ ಪತ್ನಿ ರಶ್ಮಿಕಾ ಅವರನ್ನು ಅತ್ಯಂತ ಜಾಗರೂಕತೆಯಿಂದ ಮುನ್ನಡೆಸಿಕೊಂಡು ಹೋದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಕಳೆದ ಫೆಬ್ರವರಿಯಲ್ಲಿ ಅದ್ಧೂರಿಯಾಗಿ ವಿವಾಹವಾದ ಈ ಜೋಡಿಯ ಅನ್ಯೋನ್ಯತೆ ಎಲ್ಲರ ಮನ ಗೆದ್ದಿದೆ.

ಇನ್ನು ತಿರುಪತಿ ಭೇಟಿಗೂ ಮುನ್ನ ನಿನ್ನೆ ವಿಜಯ್ ಮತ್ತು ರಶ್ಮಿಕಾ ಅವರು ತಮಿಳುನಾಡು ಸಿಎಂ ಅವರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ‘ರಣಬಾಲಿ’ ಸಿನಿಮಾದ ಪ್ರಚಾರಕ್ಕಾಗಿ ತಮಿಳುನಾಡಿಗೆ ತೆರಳಿದ್ದ ವೇಳೆ ಈ ಭೇಟಿ ನಡೆದಿದೆ.

Must Read