ಬೇಕಾಗುವ ಸಾಮಗ್ರಿಗಳು:
ಅನ್ನ
ಚನ್ನ
ಪಾಲಕ್ ಸೊಪ್ಪು
ಈರುಳ್ಳಿ
ಟೊಮೆಟೊ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಹಸಿಮೆಣಸಿನಕಾಯಿ
ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಅರಿಶಿಣ
ಎಣ್ಣೆ
ಸಾಸಿವೆ, ಜೀರಿಗೆ, ಚಕ್ಕೆ, ಲವಂಗ, ಬಿರಿಯಾನಿ ಎಲೆ
ಉಪ್ಪು, ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಸಾಸಿವೆ, ಜೀರಿಗೆ, ಚಕ್ಕೆ, ಲವಂಗ ಮತ್ತು ಬಿರಿಯಾನಿ ಎಲೆ ಹಾಕಿ ಚಟಪಟ ಎನ್ನಿಸಿ. ಆಮೇಲೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಈರುಳ್ಳಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಬಾಡಿಸಿ. ಈಗ ಹೆಚ್ಚಿದ ಪಾಲಕ್ ಸೊಪ್ಪು ಹಾಕಿ 2-3 ನಿಮಿಷ ಬೇಯಿಸಿ. ನಂತರ ಬೇಯಿಸಿದ ಚನ್ನ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, ಅರಿಶಿಣ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ಹೊಂದಿಕೊಂಡ ಮೇಲೆ, ಬೇಯಿಸಿದ ಅನ್ನವನ್ನು ಹಾಕಿ ಮೆಲ್ಲಗೆ ಮಸಾಲೆಯೊಂದಿಗೆ ಬೆರೆಸಿ. ಸಣ್ಣ ಉರಿಯಲ್ಲಿ 2 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿದರೆ ಬಿಸಿಬಿಸಿಯಾದ ಚನ್ನ ಪಾಲಕ್ ರೈಸ್ ಸವಿಯಲು ಸಿದ್ದ!



