VIRAL | ಸೋಶಿಯಲ್‌ ಮೀಡಿಯಾ ʼಪ್ಯಾರ್‌ʼ 80ರ ವೃದ್ಧನನ್ನು ವರಿಸಿದ 34ರ ಮಹಿಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರೀತಿಗೆ ವಯಸ್ಸು ಅನ್ನೋದೇ ಇಲ್ಲ ಬಿಡಿ, ಇದನ್ನು ಪ್ರೂವ್‌ ಮಾಡಿದ್ದಾರೆ ಈ ಜೋಡಿ..

ಸಾಮಾಜಿಕ ಜಾಲತಾಣದಿಂದ ಪರಿಚಯ ಆಗಿ, ಸಾಮಾಜಿಕ ಜಾಲತಾಣದಲ್ಲೇ ಲವ್‌ ಮಾಡಿ, ಸಾಮಾಜಿಕ ಜಾಲತಾಣಗಳಲ್ಲೇ ಮದುವೆಯ ಫೋಟೊಗಳನ್ನು ಈ ಜೋಡಿ ಅಪ್‌ಲೋಡ್‌ ಮಾಡಿದ್ದಾರೆ.

ಈ ರೀತಿ ಲವ್‌ ಸ್ಟೋರಿಗಳು ಬೇಕಾದಷ್ಟಿದೆ ಆದರೆ ಈ ಲವ್‌ ಸ್ಟೋರಿ ಯಾಕೆ ಸ್ಪೆಶಲ್‌ ಅಂದ್ರೆ ಈ ಜೋಡಿ ಮಧ್ಯೆ 46 ವರ್ಷಗಳ ಅಂತರ ಇದೆ.

ಹೌದು, 80 ವರ್ಷದ ವೃದ್ಧನೊಬ್ಬ 34 ವರ್ಷದ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಮಧ್ಯಪ್ರದೇಶದ ಅಗರ್‌ ಜಿಲ್ಲೆಯ ಬಲುರಾಮ್‌ ಡಿಗ್ರಿ ಹಾಗೂ ಶೀಲಾ ಇಂಗ್ಲೆ ಈಗಿನ್ನೂ ಹಸೆಮಣೆ ಏರಿದ ಕಪಲ್‌ ಆಗಿದ್ದಾರೆ.

ಕುಟುಂಬದವರು, ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ಮದುವೆಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿ ಮದುವೆ ವೈರಲ್‌ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!