ಮಹಾರಾಷ್ಟ್ರದ ಟೈಲರಿಂಗ್‌ ಅಂಗಡಿಯಲ್ಲಿ ಭೀಕರ ಅಗ್ನಿ ಅವಘಡ: ಏಳು ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಟೈಲರಿಂಗ್‌ ಅಂಗಡಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.

ಬೆಳಗ್ಗೆ ನಾಲ್ಕು ಗಂಟೆ ಜಾವದಲ್ಲಿ ಛತ್ರಪತಿ ಸಂಭಾಜಿ ನಗರದ ಅಂಗಡಿಯಲ್ಲಿ ದುರಂತ ಸಂಭವಿಸಿದೆ. ಮೂವರು ಮಹಿಳೆಯರು,ಇಬ್ಬರು ಮಕ್ಕಳು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.

ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಬೆಂಕಿ ಆರಿಸಲಾಗಿದೆ. ಜನರು ನಿದ್ದೆಯಲ್ಲಿದ್ದ ಕಾರಣ ಹೊರಬರಲಾರದೆ ಬೆಂಕಿಗೆ ಆಹುತಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!