Thursday, March 30, 2023

Latest Posts

ಕುಸಿದ ಕಟ್ಟಡಗಳ ಅವಶೇಷದಡಿ ಉಸಿರಾಡುತ್ತಿದ್ದಳು 6 ವರ್ಷದ ಬಾಲಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೂಕಂಪ ಪೀಡಿ ಟರ್ಕಿ-ಸಿರಿಯಾದಲ್ಲಿ ರಕ್ಷಣಾ ಕಾರ್ಯಾ ಮುಂದುವರಿದಿದ್ದು, ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಆರು ವರ್ಷದ ಬಾಲಕಿಯನ್ನು ರಕ್ಷಿಸಲಾಗಿದೆ.

ಎನ್‌ಡಿಆರ್‌ಎಫ್ ತಂಡ ಹಗಲು ರಾತ್ರಿ ಎನ್ನದೆ ಸತತ ಪ್ರಯತ್ನ ನಡೆಸುತ್ತಿದ್ದು, ಗಾಂಜಿಯಾಂಟೆಪ್‌ನಲ್ಲಿ ಬಾಲಕಿಯನ್ನು ರಕ್ಷಿಸಿದೆ.

ಈ ನೈಸರ್ಗಿಕ ವಿಕೋಪದಲ್ಲಿ ಟರ್ಕಿಯೊಂದಿಗೆ ಭಾರತ ನಿಂತಿದೆ, ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸುತ್ತಿದೆ, ಇಂದು ಎನ್‌ಡಿಆರ್‌ಎಫ್ ತಂಡ ಆರು ವರ್ಷದ ಬಾಲಕಿಯನ್ನು ಹೊರಕರೆತಂದಿದೆ ಎಂದು ಗೃಹ ಸಚಿವಾಲಯದ ವಕ್ತಾರರು ಟ್ವೀಟ್ ಮಾಡಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!