ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮೇಲೆ ಪಾಕ್ ಭರವಸೆ ಇಟ್ಟಿದೆ.
ಪಾಕ್ ಸರ್ಕಾರದ ಕೋರಿಕೆ ಮೇಲೆ ಐಎಂಎಫ್ ನಿಗಮ ಇಸ್ಲಾಮಾಬಾದ್ ತಲುಪಿ ಪರಿಶೀಲನೆ ನಡೆಸಿದೆ, ಆದರೆ ಹಣಕಾಸು ನೆರವಿನ ಬಗ್ಗೆ ಆಲೋಚಿಸಲು ಇನ್ನಷ್ಟು ಸಮಯ ಬೇಕು ಎಂದು ಐಎಂಎಫ್ ಹೇಳಿದೆ. ಪಾಕಿಸ್ತಾನದ ದುರ್ಬಲ ಆರ್ಥಿಕತೆಯ ಅಂಶಗಳ ಬಗ್ಗೆ ಚರ್ಚೆ ಮಾಡಲಾಗಿದೆ.