ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಯಲ್ಲಿ ಕೆಟ್ಟುನಿಂತ ಮಾರುತಿ ಓಮ್ನಿ ಕಾರಿನಲ್ಲಿಯೇ ಯುವತಿಯೊಬ್ಬಳು ಕಳೆದ ಎರಡು ವರ್ಷಗಳಿಂದ ವಾಸ ಮಾಡುತ್ತಿರುವ ಘಟನೆ ಹೈದರಾಬಾದ್‌ನ ಎಸ್‌ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಧುರಾ ನಗರದಲ್ಲಿ ಬೆಳಕಿಗೆ ಬಂದಿದೆ.
ಇನ್ನೊಂದು ಅಚ್ಚರಿಯ ವಿಚಾರ ಎಂದರೆ ಕಾರಿನಲ್ಲಿ ವಾಸ ಮಾಡುತ್ತಿರುವ ಯುವತಿಯ ಹೆಸರಿನಲ್ಲಿಯೇ ಕಾರು ನೋಂದಣಿಯೂ ಆಗಿದೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಗುರ್ರಂ ಅನಿತಾ ಎಂಬ ಈ ಯುವತಿ, ರಾಜದೂತ್ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದರು. ಶುಲ್ಕ ಪಾವತಿಸದ ಕಾರಣ ಆಕೆಯನ್ನು ಹಾಸ್ಟೆಲ್ ಮ್ಯಾನೇಜರ್ ಹೊರಹಾಕಿದ್ದಾರೆ. ಆ ಬಳಿಕದಿಂದ ಆಕೆ ತನ್ನ ವಸ್ತುಗಳನ್ನು ತೆಗೆದುಕೊಂಡು ಬಂದು ಕಾರಿನಲ್ಲಿ ವಾಸಿಸುತ್ತಿದ್ದಾಳೆ ಎಂಬುದು ಗೊತ್ತಾಗಿದೆ.
ಇದೀಗ ಗಾಯದ ಮೇಲಕೆ ಬರೆ ಎಂಬಂತೆ ರಸ್ತೆಯಲ್ಲಿ ಕಾರು ಪಾರ್ಕ್ ಮಾಡಿರುವ ಬಗ್ಗೆ ಆಕೆಗೆ ದಂಡ ವಿಧಿಸಿ ಕೌನ್ಸೆಲಿಂಗ್ ಮಾಡಲಾಗುವುದು ಎಂದು ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ